ಬೆಂಗಳೂರು: ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯು ದಿನಾಂಕ 06 ನೇ ಸೆಪ್ಟೆಂಬರ್ 2025 ರಂದು ಬೆಂಗಳೂರಿನ ಎಂ. ಜಿ. ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ನಡೆಯಿತು.
ಸಭೆಯಲ್ಲಿ ತೀರ್ಮಾನಿಸಿದಂತೆ ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರ ಪೈಕಿ ಶ್ರೀ ವೈ. ಎಸ್. ನಂಜುಂಡ ಸ್ವಾಮಿ – ಅಧ್ಯಕ್ಷರು, ಶ್ರೀ ಬಾಬು ಜತ್ತಕರ್, ಶ್ರೀ ನಾಗನಾಥ್ ಜಿ ಎಸ್ – ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀ ಎಂ. ವಿ. ಶಿವರಾಂ ಹಾಗೂ ಶ್ರೀ ಸಂಕೇತ್ ಗುರುದತ್ತ,ಮಹಾ ಪೋಷಕ ರಾಗಿ ಶ್ರೀ ಬಿ. ಜಿ. ಗುಜ್ಜಾರಪ್ಪ, ಶ್ರೀ ವಿ. ಆರ್. ಸಿ. ಶೇಖರ್ ಹಾಗೂ ಶ್ರೀ ಎಚ್ ಬಿ ಮಂಜುನಾಥ ಇವರುಗಳು ಸರ್ವಾನುಮತದಿಂದ ಆಯ್ಕೆ ಆಗಿರುತ್ತಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀ ಎಚ್ ಎಸ್ ವಿಶ್ವನಾಥ್, ಶ್ರೀ ರಘುಪತಿ ಶೃಂಗೇರಿ, ಶ್ರೀ ಚಂದ್ರ ಗಂಗೊಳ್ಳಿ, ಡಾ. ಜೆ. ಬಾಲಕೃಷ್ಣ, ಶ್ರೀ ಎಂ. ಎನ್ ಸುಬ್ರಮಣ್ಯ, ವೆಂಕಟ್ ಭಟ್ ಎಡನೀರು, ಶ್ರೀ ಸಿ. ಎಂ. ನಾಡಿಗೇರ್, ಶ್ರೀ ಅರುಣ್ ಕುಮಾರ್ ಹಾಗೂ ಶ್ರೀ ಬದರಿ ಪುರೋಹಿತ್ ಆಯ್ಕೆಗೊಂಡಿರುತ್ತಾರೆ.
ಇದೇ ಸಂದರ್ಭದಲ್ಲಿ ಹೊಸದಾಗಿ ಯುವ ವ್ಯಂಗ್ಯಚಿತ್ರಕಾರರ ಪಡೆಯನ್ನು ರಚಿಸಲಾಗಿದ್ದು, ಅದರಲ್ಲಿ ಶ್ರೀ ದತ್ತಾತ್ರಿ ಎಂ ಎನ್, ಶ್ರೀ ರವಿ ಪೂಜಾರಿ, ಶ್ರೀ ಪ್ರಸನ್ನ ಕುಮಾರ್, ಶ್ರೀ ವಿನೋದ್ ಆಚಾರ್ಯ, ಶ್ರೀ ಸುಮುಖ್ ಶಾನುಭೋಗ್, ಶ್ರೀ ಕೊರಲಕುಂಟೆ ದಯಾನಂದ್, ಶ್ರೀಮತಿ ರೆಬೇಕಾ ಟೇಲರ್ ಇವರುಗಳು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ವ್ಯಂಗ್ಯಚಿತ್ರಕಾರ ಉಡುಪಿಯ ಶ್ರೀ ಎಂ. ಜೀವನ್ ಶೆಟ್ಟಿ ಅವರನ್ನು ವ್ಯಂಗ್ಯ ಚಿತ್ರ ಕ್ಷೇತ್ರದಲ್ಲಿ ಜೀವಮಾನದ ಸೇವೆಗಾಗಿ ಸನ್ಮಾನಿಸಲಾಯಿತು.