ಬೆಂಗಳೂರು : ಹಿರಿಯಹಾಸ್ಯನಟ ಉಮೇಶ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಿತಿ ಗಂಭೀರವಾದ ಹಿನ್ನೆಲೆ ಅವರನ್ನು ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .
ಎಂ. ಎಸ್ ಉಮೇಶ್ ಮೈಸೂರು ಶ್ರೀಕಂಠಯ್ಯ ಉಮೇಶ್ , MS ಉಮೇಶ್ ಅಥವಾ ಸರಳವಾಗಿ ಉಮೇಶ್ ಎಂದು ಪ್ರಸಿದ್ಧರಾಗಿದ್ದಾರೆ, ಅವರು ಆರು ದಶಕಗಳ ಕಾಲ ವೃತ್ತಿಜೀವನವನ್ನು ಹೊಂದಿರುವ ಭಾರತೀಯ ಕನ್ನಡ ಸಿನಿಮಾ ನಟರಾಗಿದ್ದಾರೆ.
ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಉಮೇಶ್ ತಮ್ಮ ವಿಶಿಷ್ಟ ಸಂಭಾಷಣೆ, ಮುಖಭಾವ ಮತ್ತು ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಮೊದಲು ಬಾಲನಾಟರಾಗಿ ಮಕ್ಕಳ ಸೈನ್ಯ ಚಿತ್ರದಲ್ಲಿ ನಟಸಿದ್ದರು. ಆನಂತರ ಹಲವಾರು ಕನ್ನಡ ಚಿತ್ರಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು.