ಹರಿಹರ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಣ ಅಧಿಕಾರಿ, ಹಿರಿಯ ಸಾಹಿತಿ ಜೆ. ಕಲೀಂ ಬಾಷಾ(74) ನಿಧನರಾದರು.
ಕಥೆ, ಕವನ, ಲೇಖನ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿರುವ ಸ್ವಾತಂತ್ರ್ಯ ಹೋರಾಟಗಾರರ ಜೀವಚರಿತ್ರೆ ಬರೆದಿದ್ದರು.
ಹರಿಹರ ಬಂಡಾಯ ಸಾಹಿತಿಗಳೆಂದೇ ಖ್ಯಾತಿ ಪಡೆದಿದ್ದ ಜೆ.ಕಲೀಂ ಬಾಷಾ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿದ್ದವು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.