ಮೈಸೂರು: ನಂಜನಗೂಡಿನ ಮಲ್ಲನಮೂಲೆಯ ಶ್ರೀ ಗುರು ಕಂಬಳೇಶ್ವರ ಮಠದ ಪೀಠಾಧಿಪತಿ, ನಿ.ಪ್ರ.ಸ್ವ ಶ್ರೀ ಶ್ರೀ ಚನ್ನಬಸವ ಸ್ವಾಮೀಜಿ (86 ವರ್ಷ) ಲಿಂಗೈಕ್ಯರಾಗಿದ್ದಾರೆ.
ಅವರು ಕಳೆದ ಹಲವು ದಶಕಗಳಿಂದ ತಮ್ಮ ಸಾಮಾಜಿಕ ಕಳಕಳಿ ಹಾಗೂ ಶಿಕ್ಷಣ, ದಾಸೋಹ ಮತ್ತು ಬಡವರ ಬಗ್ಗೆ ವಿಶೇಷ ಕಾಳಜಿಯ ಮುಖಾಂತರ ನಾಡಿನುದ್ದಕ್ಕೂ ಚಿರಪರಿಚಿತರಾಗಿದ್ದರು.
ಸ್ವಾಮೀಜಿಗಳ ನಿಧನಕ್ಕೆ ಕೇಂದ್ರ ಸಚಿವ ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ. ಪೂಜ್ಯರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.






























