ಶ್ರೀನಗರ : ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು ಸಂಜೆಯಿಂದ ಕದನವಿರಾಮ ಘೋಷಿಸಲಾಗಿತ್ತು. ಆದರೆ, ಆ ಒಪ್ಪಂದವನ್ನು ಒಂದು ದಿನವೂ ಉಳಿಸಿಕೊಳ್ಳಲು ಸಾಧ್ಯವಾಗದೆಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದು, 7 ಮಂದಿ ಸೈನಿಕರಿಗೆ ಗಾಯಗಳಾಗಿವೆ.
ಅಮೆರಿಕ ಮಧ್ಯಸ್ಥಿಕೆ ವಹಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಘೋಷಿಸಿತ್ತು. ಆದರೆ ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ಪಾಕ್ ದಾಳಿ ನಡೆಸಿದೆ. ಜಮ್ಮುವಿನ ಆರ್‌ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್‌ಎಫ್ ಎಸ್‌ಐ ಎಂಡಿ ಮೊಹಮ್ಮದ್ ಇಮ್ತಿಯಾಜ್ ಹುತಾತ್ಮರಾಗಿದ್ದಾರೆ. ಹಾಗೂ 7 ಸೈನಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ಈ ಮೂಲಕ ಪಾಕಿಸ್ತಾನ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ದೇಶವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.