ಬೆಂಗಳೂರು: ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಬಂಧನದಲ್ಲಿದ್ದಾರೆ. ಇಂದು 3ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಪೊಲೀಸರು ಆರೋಪಿಯನ್ನ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿ ಮನುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದ್ದಾರೆ.
ಮೆಡಿಕಲ್ ಟೆಸ್ಟ್ ನಡೆದ ಬಳಿಕ ಪೊಲೀಸರು ಮಧ್ಯಾಹ್ನ 3ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರು ಮನು ಪರ ವಕೀಲರಿಗೆ ಕೆಲ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ, ನನ್ನ ಕಕ್ಷಿದಾರರು ರಿಯಾಲಿಟಿ ಶೋನಲ್ಲಿ ಅಭಿನಯಿಸಿದ್ದಾರೆ. ಮದುವೆಯಾಗಿದೆ, ಆದರೆ ದೂರುದಾರೆ ಬೇರೆಯವರು ಎಂದು ಉತ್ತರ ನೀಡಿದರು. ದೂರುದಾರೆಗೆ ಮದುವೆ ಆಗಿದ್ಯಾ ಎಂದು ಕೇಳಿದ್ದಕ್ಕೆ ಸಂತ್ರಸ್ತೆಯ ಪರ ವಕೀಲೆ ಮೊಬೈಲ್‌ನಲ್ಲಿರುವ ಕೆಲ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಿದರು. ಅಂತಿಮವಾಗಿ ಕೋರ್ಟ್ 14 ದಿನಗಳ ಕಾಲ ಮನುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಮನು ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಲಿದ್ದಾರೆ.