ಶಿವಮೊಗ್ಗ : ಶಿವಮೊಗ್ಗದ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಹೆಡ್ ಕಾನ್ ಸ್ಟೇಬಲ್ ಮೊಹ್ಮಮದ್ ಝಕ್ರಿಯ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದ ಮೊಹಮ್ಮದ್ ಇತ್ತೀಚೆಗೆ ಡ್ಯೂಟಿಗೆ ಹಾಜರಾಗಿದ್ದರು. ಬಸ್ ನಿಲ್ದಾಣದ ಬಳಿ ಕರ್ತವ್ಯ ಮುಗಿದ ಬಂದ ಅವರು ಪೊಲೀಸ್ ಠಾಣೆಯ ಹಿಂಬದಿಯ ಸೆಲ್ ಇರುವ ಜಾಗದಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































