ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಸದ್ಯ 60ನೇ ದಿನಕ್ಕೆ ಕಾಲಿಟ್ಟಿದೆ. ಈ ಇಡೀ ವಾರ ಬಿಗ್ಬಾಸ್ ಸಾಮ್ರಾಜ್ಯವಾಗಿ ಬದಲಾಗಿತ್ತು. ಇದರ ಮಧ್ಯೆ ಬಿಗ್ಬಾಸ್ ಸಾಮ್ರಾಜ್ಯದಿಂದ ಆಚೆ ಹೋಗಲು 7 ಪ್ರಜೆಗಳು ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ತ್ರೀವಿಕ್ರಮ್, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಾಮಿನೇಟ್ ಆಗಿದ್ದರು.
ಸದ್ಯ ಕಿಚ್ಚನ ಪಂಚಾಯ್ತಿಯಲ್ಲಿ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಗೋಲ್ಡ್ ಸುರೇಶ್ ಹಾಗೂ ತ್ರೀವಿಕ್ರಮ್ ಸೇಫ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸದ್ದು ಮಾಡಿದ್ದ ಈ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದಾರೆ. ಹೌದು ವೈಲ್ಡ್ ಕಾರ್ಡ್ ಮೂಲಕ ಬಂದ ಶೋಭಾ ಶೆಟ್ಟಿ ಆರಂಭದಲ್ಲಿ ಸಖತ್ ಸದ್ದು ಮಾಡಿದ್ದರು.
ಆದರೆ ಈ ವಾರ ಪೂರ್ತಿ ಸೈಲೆಂಟ್ ಆಗಿದ್ದರು. ಎಲಿಮಿನೇಷನ್ ಭಯ ಕೂಡ ಅವರನ್ನು ಕಾಡುತ್ತಿತ್ತು. ಸದ್ಯ ಶೋಭಾ ಶೆಟ್ಟಿ ಮನೆಯಿಂದ ಆಚೆ ಬಂದಿದ್ದಾರೆ. ಇಂದು ರಾತ್ರಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಸಂಚಿಕೆಯಲ್ಲಿ ನಟ ಸುದೀಪ್ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.