ಬೆಂಗಳೂರು : 2024-25 ರ ಸಾಲಿನಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ 13 ಸಾವಿರ ಕೋಟಿ ಟಾರ್ಗೆಟ್ ಕೊಟ್ಟಿತ್ತು. ಆದ್ರೆ ನಿಗಧಿತ ಅವಧಿಯ ಒಳಗೆ ಗುರಿ ತಲುಪುವಲ್ಲಿ ಇಲಾಖೆ ವಿಫಲ ಆಗಿದೆ. ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಇಲಾಖೆಗೆ ₹ 9,393 ಕೋಟಿ ಗುರಿ ಸರ್ಕಾರ ಕೊಟ್ಟಿತ್ತು. ಆದ್ರೆ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಆದಾಯ ಸಂಗ್ರಹವಾಗಿದ್ದು ₹8,666 ಕೋಟಿ ಮಾತ್ರ ಆಗಿರುತ್ತೆ. ಒಟ್ಟು 771 ಕೋಟಿ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷವೂ ಸಹ ಆದಾಯ ಟಾರ್ಗೆಟ್ ರೀಚ್ ಮಾಡೋದ್ರಲ್ಲಿ ಸಾರಿಗೆ ಇಲಾಖೆ ವಿಫಲ ಆಗಿದೆ. ಈ ಬಾರಿಯೂ ಸರ್ಕಾರ ನೀಡಿರೋ ಗುರಿ ಆರ್‌ಟಿಓ ಅಧಿಕಾರಿಗಳು ತಲುಪಿಲ್ಲ. ಸಾರಿಗೆ ಇಲಾಖೆಯಿಂದ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ನಿರಾಸೆಯಾಗಿದೆ.
