ಢಾಕಾ: ಹಸುವಿನ ತಲೆಗೆ ಗುರಿ ಇಟ್ಟ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಪರಿಣಾಮ ಹಸು ಮೃತಪಟ್ಟಿದೆ. ಈ ಅಂತ್ಯಂತ ಅಮಾನವೀಯ ಕೃತ್ಯದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಸುಮಾರು ಆರು ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ನಡೆದಿದ್ದು ಎನ್ನಲಾದ ಈ ಘಟನೆಯ ವಿಡಿಯೋ ನೋಡಿದ ಜನ ಮಮ್ಮಲ ಮರುಗುತ್ತಿದ್ದಾರೆ. ಗುಂಡು ಹಾರಿಸಿದ ಈತನನ್ನೂ ಅದೇ ರೀತಿ ಶಿಕ್ಷಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು ‘ಇದು ಕೇರಳದಲ್ಲಿ ನಡೆದಿದ್ದು, ಪ್ರಿಯಾಂಕಾ ಗಾಂಧಿ ಅವರ ಗೆಲುವಿನ ಸಂಭ್ರಮಾಚರಣೆಗಾಗಿ ಈ ವ್ಯಕ್ತಿ ಹಸುವಿನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದ್ರೆ ಇದು ಬಾಂಗ್ಲಾದೇಶದಲ್ಲಿ ಆರು ತಿಂಗಳ ಹಿಂದೆ ನಡೆದ ಘಟನೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.