ಚಿತ್ರದುರ್ಗ: ಸಂವಿಧಾನ, ಸರ್ಕಾರದ ಆಶಯದಂತೆ ವಿಕಲಚೇತರ ಸಮಗ್ರ ಅಭಿವೃಧ್ದಿಗೆ ಶಾಲಾ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ ಎಂದು ಚಿತ್ರದುರ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಂ ಆರ್ ಮಂಜುನಾಥ ತಿಳಿಸಿದರು
ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದ ಬಿಆರ್‌ಸಿ ಕಚೇರಿಯ ಆವರಣದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಡಿಡಿಪಿಐ, ಆರ್‌ಎಂಎಸ್‌ಎ, ಬಿಇಒ, ಎಪಿಡಿ ಯೋಜನೆಯಡಿ ಮತ್ತು ಬಿಆರ್‌ಸಿ ಕೇಂದ್ರದ ವತಿಯಿಂದ ಚಿತ್ರದುರ್ಗ ತಾಲೂಕು ಅಂಗವಿಕಲ ಮಕ್ಕಳು ಮತ್ತು ಸಹಪಾಠಿಗಳು ಸಮುದಾಯದ ಜನರಿಗೆ ವಿಕಲ ಚೇತನ ಮಕ್ಕಳ ಶಿಕ್ಷಣ ಮತ್ತು ಸರ್ಕಾರದ ಸೌಕರ್ಯಗಳ ಕುರಿತ ಅರಿವು ಹಾಗೂ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ವಿಕಲ ಚೇತನ ವಿದ್ಯಾರ್ಥಿಗಳಿಗೆ ಸಾಧನ ಉಪಯುಕ್ತ ಸಲಕರಣೆಗಳ ವಿತರಿಸಿ ಮಾತನಾಡಿದರು
ಸಮಗ್ರ ಶಿಕ್ಷಣ ಡಿವೈಪಿಸಿ ಸಿ ಎಸ್ ವೆಂಕಟೇಶಪ್ಪ ಪ್ರಾಸ್ತಾವಿಕ ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಮನ್ವಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ನಿರ್ದೇಶನದಂತೆ ಸಾಮಾನ್ಯ ಮಕ್ಕಳೊಂದಿಗೆ ಗುಣಾತ್ಮಕ ಶಿಕ್ಷಣ ನೀಡಿ ವಿಶೇಷ ಸೌಲಭ್ಯಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು
ಚಿತ್ರದುರ್ಗ ತಾಲೂಕು ಬಿಇಒ ಎಸ್ ನಾಗಭೂಷಣ ಮಾತನಾಡಿ ಶಾಲಾ ಶಿಕ್ಷಕರು, ಐಇಆರ್‌ಟಿ, ಬಿಐಆರ್‌ಟಿಗಳು ಶಿಕ್ಷಣ ಇಲಾಖೆಯ ಅನುಷ್ಟಾನಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ ವಿಕಲ ಚೇತನ ಮಕ್ಕಳಿಗೆ ಸರ್ಕಾರ ನೀಡಿರುವ ಸೌಲಭ್ಯಗಳ ಬಳಕೆ ಮತ್ತು ಮೂಲ ಸೌಕರ್ಯ ನೀಡಿ ಶಿಕ್ಷಣ ನೀಡಲಾಗುತ್ತಿದೆಯೇ ಅವರಿಗೆ ಇರುವ ಕುಂದುಕೊರತೆಗಳನ್ನು ಅರಿತು ನೀಗಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು
ಇದೇ ವೇಳೆ ಚಿತ್ರದುರ್ಗ ತಾಲೂಕು ವಿಕಲ ಚೇತನ ವಿದ್ಯಾರ್ಥಿಗಳು ಮತ್ತು ಅವರ ಸಹಪಾಠಿಗಳಿಗೆ ಸರ್ಕಾರದ ಉಚಿತ ಸಾಧನ ಸಲಕರಣೆ ನೀಡಲಾಯಿತು ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಡಿವೈಪಿಸಿ ಸಿ ಎಸ್ ವೆಂಕಟೇಶಪ್ಪ, ತಾಲೂಕು ಬಿಇಒ ಎಸ್ ನಾಗಭೂಷಣ, ಕ್ಷೇತ್ರಸಮನನ್ವಯಾಧಿಕಾರಿ ಇ ಸಂಪತ್‌ಕುಮಾರ, ಬಿಐಆರ್‌ಟಿ ರಾಜಣ್ಣ, ರಾಜೀವ, ತಿಮ್ಮಾರೆಡ್ಡಿ, ಪುಷ್ಪಾ, ಚಿತ್ತಯ್ಯ, ಮಾಲತೇಶ, ವೆಂಕಟೇಶರೆಡ್ಡಿ, ಶಿವರುದ್ರಪ್ಪ, ಪ್ರಸನ್ನ, ಗೋವಿಂದಪ್ಪ ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಪೋಷಕರು ಇದ್ದರು