ಚಿತ್ರದುರ್ಗ : ಗಾಣಿಗ ಸಮಾಜದ ತೈಲೇಶ್ವರ ಸ್ವಾಮಿಜಿಯವರು ಸಚಿವ ಶಿವರಾಜ್ ತಗಂಡಗಿಯವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು, ಅವರು ಕಮಿಷನ್ ಮೇಲೆ ಬದುಕುವಂತ ಜನ ಅಲ್ಲ, ನ್ಯಾಯ ನಿಷ್ಠೆಯಿಂದ ರಾಜಕೀಯ ಜೀವನದಲ್ಲಿ ಇದ್ದಾರೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಚಿವ ಮೇಲೆ ಬಂದಿರುವ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಚಿತ್ರದುರ್ಗ ನಗರದ ಹೊರ ವಲಯದ ಭೋವಿ ಗುರು ಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಸಚಿವ ಶಿವರಾಜ್ ತಗಂಡಗಿಯವರು ಪ್ರಮಾಣಿಕವಾಗಿ ರಾಜಕೀಯವನ್ನು ನಡೆಸುತ್ತಿದ್ದಾರೆ, ಅವರು ಯಾರಿಂದಲೂ ಸಹಾ ಹಣವನ್ನು ಪಡೆದಿಲ್ಲ, ಇದ್ದಲ್ಲದೆ ಅವರೆ ಸಾಕಷ್ಟು ಜನರಿಗೆ ಸಹಾಯವನ್ನು ಮಾಡಿದ್ದಾರೆ. ರಾಜಕೀಯದಿಂದ ಹಣವನ್ನು ಮಾಡುವ ಉದ್ದೇಶ ಅವರಲ್ಲಿ ಇಲ್ಲ, ತಮ್ಮ ಜೀವನದಲ್ಲಿ ಕಾಯಕ ಪ್ರವೃತ್ತಿಯನ್ನು ರೂಢಿಸಿಕೊಂಡವರು ತಮ್ಮಲ್ಲಿ ಇದ್ದನ್ನು ಬೇರೆಯವರೊಂದಿಗೆ ಹಂಚಿಕೊಂಡು ಊಟವನ್ನು ಮಾಡುವವರಾಗಿದ್ದಾರೆ ಎಂದರು.
ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಬೇಕಾದರೂ ಸಹಾ ಅದಕ್ಕೆ ತನ್ನದೆ ಆದ ನಿಯಮಗಳು ಇವೆ ಅದನ್ನು ಪಾಲಿಸಬೇಕಿದೆ, ಸರ್ಕಾರದಿಂದ ಬಿಡುಡಗೆಯಾಗುವ ಅನುದಾನದಲ್ಲಿ 1 ಕೋಟಿಗಿಂತ ಕಡಿಮೆ ಇದ್ದರೆ ಸಚಿವರೇ ಬಿಡುಗಡೆ ಮಾಡುತ್ತಾರೆ ಆದರೆ 1 ಕೋಟಿಗಿಂತ ಜಾಸ್ತಿಯಾದರೆ ಅ ಫೈಲು ಮುಖ್ಯಮಂತ್ರಿ ಯವರ ಬಳಿ ಹೋಗುತ್ತದೆ ಅವರು ಪರಿಶೀಲಿಸಿದ ನಂತರ ಹಣಕಾಸು ಇಲಾಖೆಗೆ ಬಂದು ಅಲ್ಲಿ ಅನುಮೋದನೆ ಪಡೆದ ನಂತರ ಹಣ ಬಿಡುಗಡೆಯಾಗುತ್ತದೆ. ಈ ಗಾಣಿಗ ಸಮುದಾಯದಲ್ಲಿ ಸ್ವಾಮಿಜೀ ಗಳಾದವರು ತಮ್ಮ ಪೂರ್ವಾಶ್ರಮದಲ್ಲಿ ರಾಜಕೀಯದಲ್ಲಿ ಇದ್ದರು ಹಾಗೂ ಸಚಿವರಾಗಿ ಅನುಭವವನ್ನು ಹೊಂದಿದ್ದಾರೆ, ಅವರಿಗೆ ಸರ್ಕಾರದಿಂದ ಯಾವ ರೀತಿ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಇದೆ ಎಂದ ಶ್ರೀಗಳು ಒಂದು ಸರ್ಕಾರ ಯಾವುದಕ್ಕಾದರೂ ಅನುದಾನ ನೀಡುತ್ತೇವೆ ಎಂದು ತಿಳಿಸಿ ಆ ಸರ್ಕಾರ ಹೋದರೆ ಹೊಸ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಅನುದಾನ ಬಿಡುಗಡೆಯಾಗುವುದು ಕಷ್ಠದ ಕೆಲಸವಾಗಿದೆ ಎಂದು ತಮ್ಮ ಅನುಭವವನ್ನು ತಿಳಿಸಿದರು.
ತಗಂಡಗಿಯವರು ಕಟ್ಟ ಕಡೆಯ ಸಮುದಾಯಕ್ಕೂ ಸಹಾ ಸರ್ಕಾರದ ಸೌಲಭ್ಯ ಸಿಗಬೇಕು ಎನ್ನುವವರಾಗಿದ್ದಾರೆ ಈ ರೀತಿಯಾದ ಕಮಿಷನ್ ಆಸೆಯನ್ನು ಹೊಂದಿಲ್ಲ, ಪ್ರತಿ ಸಮುದಾಯದ ಹಿತವನ್ನು ಕಾಪಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಗಾಣಿಗ ಸಮಾಜದ ತೈಲೇಶ್ವರ ಸ್ವಾಮಿಜಿಯವರು ಮಾಡಿರುವ ಆರೋಪ ಆಧಾರ ರಹಿತವಾದ ಆರೋಪವಾಗಿದೆ ಯಾವುದೇ ಒಂದು ಆರೋಪವನ್ನು ಮಾಡಬೇಕಾದರೆ ಅದಕ್ಕೆ ತಕ್ಕ ಸಾಕ್ಷಿಗಳು ಆಧಾರಗಳು ಆಗತ್ಯವಾಗಿದೆ ಸಚಿವರು ಕಮಿಷನ್ ಕೇಳಿದ್ದಕ್ಕೆ ಏನಾದರೂ ಸಾಕ್ಷಿ ಇದ್ದೆಯೇ ಎಂದು ಪ್ರಶ್ನಿಸಿದ ಶ್ರೀಗಳು, ನಿಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದು ಮಠವನ್ನು ಅಬೀವೃದ್ದಿ ಮಾಡಿ ಹಾಗೆಯೇ ಸಮುದಾಯದ ಅಭೀವೃದ್ದಿಯನ್ನು ಮಾಡಿ ಆದರೆ ವಿನಾಕಾರಣ ಸ್ವಚ್ಚವಾದ ರಾಜಕಾರಣಿಯ ವಿರುದ್ಧ ಈ ರೀತಿಯಾದ ಆರೋಪ ಸರಿಯಲ್ಲ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಗೋಷ್ಟಿಯಲ್ಲಿ ಸಿಇಓ ಗೌನಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಎಸ್.ಜೆ.ಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ಕಾಳಘಟ್ಟದ ಹನುಮಂತಪ್ಪ, ಚಳ್ಳಕೆರೆ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷರಾದ ಹೆಚ್.ಅಂಜನೇಯ, ನಿರ್ದೇಶಕರಾದ ಈರಣ್ಣ ಭಾಗವಹಿಸಿದ್ದರು.