ಮೈಸೂರು : ಬೇನಾಮಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಸ್ಥರು ಜಮೀನು ಖರೀದಿ ಮಾಡಿದ್ದಾರೆ ಆರೋಪ ಮಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ, ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಭೂಪರಿವರ್ತನೆ ಆದೇಶದ ಬಳಿಕ ಗೇಣಿ ಮತ್ತು ಪಹಣಿ ಯಲ್ಲಿ ಮಾಲೀಕರ ಹೆಸರು ಬರುವಂತಿಲ್ಲ. ಬದಲಿಗೆ, ಎಮ್.ಎ.ಖರಾಬು ಅಥವಾ ಅನ್ಯಕ್ರಾಂತ (ಭೂ ಪರಿವರ್ತನೆ) ಎಂದು ಉಲ್ಲೇಖಿಸಬೇಕು.
ಆದರೆ 2006 ಅನ್ಯಕ್ರಾಂತ ಆದೇಶವಾಗಿದ್ದರೂ ಮಾಲೀಕರ ಹೆಸರು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಈಗಲೂ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿ ಹೆಸರು ಪಹಣಿಯಲ್ಲಿದೆ. ಕೃಷಿಭೂಮಿ ಎಂದು ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. 2009-10ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ಉಲ್ಲೇಖವಿದೆ.
ಆದರೆ, ಅಂತಿಮ ಅಧಿಸೂಚನೆ ಹೊರಡಿಸಿದ 13 ವರ್ಷಗಳ ನಂತರ ಕೈಬಿಡಲಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ? ದೂರುದಾರ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.