ಚಿತ್ರದುರ್ಗ : ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸದನದಲ್ಲಿ ವಡ್ಡ ಎಂಬ ಪದವನ್ನು ಬಳಕೆ ಮಾಡಿದ ಹಿನ್ನಲೆಯಲ್ಲಿ ಭೋವಿ ಗುರಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ.
ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು,ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸದನದಲ್ಲಿ ಇತ್ತಿಚೆಗೆ ಮೃತರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನದ ಹಿನ್ನಲೆಯಲ್ಲಿ ಅವರ ಬಗ್ಗೆ ಸಂತಾಪ ಸೂಚಿಸುವ ಸಮಯದಲ್ಲಿ ಅವರ ಆಡಿದ ಮಾತು ನಮ್ಮ ಸಮುದಾಯಕ್ಕೆ ಧಕ್ಕೆಯನ್ನುಂಟು ಮಾಡಿದೆ ಇದು ಖಂಡನೀಯ ಈ ಖೂಡಲೇ ಅವರು ಕ್ಷಮೆಯನ್ನು ಕೇಳಬೇಕು ಅವರು ಆಡಿದ ಮಾತನ್ನು ವಾಪಾಸ್ಸ್ ಪಡೆಯಬೇಕು ಆದೇ ರೀತಿ ಸದನದ ಕಡತದಲ್ಲಿ ನಮೂದಾಗಿರುವ ಆ ಪದವನ್ನು ತೆಗೆಯಬೇಕೆಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಆಗ್ರಹಿಸಿದ್ದಾರೆ.
ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ನಮ್ಮ ಮಠಕ್ಕೂ ನಮ್ಮ ಸಮುದಾಯಕ್ಕೂ ಬಹಳವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ಸಮಯದಲ್ಲಿ ನಾವುಗಳು ಅವರಿಗೆ ಹಲವಾರು ಕೆಲಸಗಳನ್ನು ಹೇಳಿದ್ದೇವು ಅದನ್ನು ಅವರು ಚಾಚು ತಪ್ಪದೆ ಮಾಡಿದ್ದಾರೆ. ಇದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಮ್ಮ ಸಮುದಾಯಕ್ಕೆ ನೀಡಿದ್ದಾರೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಮಂತ್ರಿಗಳಾಗಲು ಸಹಾ ಅವರು ನೆರವಾಗಿದ್ದಾರೆ, ಇದ್ದಲ್ಲದೆ ಚುನಾವಣೆಯ ಸಮಯದಲ್ಲಿ ಚಿತ್ರದುರ್ಗ ಹಾಗೂ ಬಾಗಲಕೋಟೆಯ ಮಠಗಳಿಗೆ ಭೇಟಿ ನೀಡಿ ನಮ್ಮ ಆರ್ಶೀವಾದವನ್ನು ಪಡೆದಿದ್ದಾರೆ ತಮ್ಮ ಮಗಳ ಮದುವೆಗೂ ಸಹಾ ನಮ್ಮನ್ನು ಆಹ್ವಾನ ಮಾಡಿದ್ದರು ಎಂದು ಅವರ ಕಾರ್ಯವನ್ನು ನೆನೆದರು.
ಸದನದಲ್ಲಿ ಅವರು ನಾನು ಚಿಕ್ಕವನಾಗಿದ್ದಾಗ ವಡ್ಡ ವಡ್ಡನಾಗಿದ್ದೇ ಎಂದು ಮಾತನಾಡಿದ್ದಾರೆ ಅವರು ಮಾಡಿದ ಪದದ ಬಳಕೆಯಿಂದ ಅದು ಕಡತದಲ್ಲಿ ಸೇರಿ ಹೋಗುತ್ತದೆ ಇದರಿಂದ ಅದು ಬೈಗುಳಾಗಿ ಉಳಿಯತ್ತದೆ ಮುಂದಿನ ದಿನದಲ್ಲಿ ಇದನ್ನು ಯಾರೂ ಬೇಕಾದರೂ ಸಹಾ ಬಳಕೆ ಮಾಡಬಹುದಾಗುತ್ತದೆ ಸಂವಿಧಾನಿಕ ಹುದ್ದೆಯಲ್ಲಿರುವ ಅವರು ಈ ರೀತಿಯಾದ ಮಾತುಗಳನ್ನು ಆಡುವಾಗ ಎಚ್ಚರವನ್ನು ವಹಿಸಬೇಕಿತ್ತು, ಈ ಮಾತುಗಳಿಂದ ನಮ್ಮ ಶಿಷ್ಯ ಸಮುದಾಯ ತುಂಬಾ ಆಂತಕಗೊಂಡಿದೆ ಇವರ ಮೇಲೆ ದೂರನ್ನು ದಾಖಲಿಸುವಂತೆಯೂ ಸಹಾ ನಮ್ಮ ಮೇಲೆ ಒತ್ತಡವನ್ನು ತರಲಾಗುತ್ತಿದೆ ಆದರೆ ನಾವು ಶಾಂತಿಯಿಂದ ಇರುವಂತೆ ತಿಳಿಸಲಾಗಿದೆ ಈ ಮುಂಚೆ ಶಿವಕುಮಾರ್ ರವರಿಗೆ ಸಮಯವನ್ನು ನೀಡಿ ತದ ನಂತರ ಏನು ಆಗದಿದ್ದಾಗ ಮುಂದುವರೆಯಲಾಗುವುದೆಂದು ತಿಳಿಸಲಾಗಿದೆ ಎಂದು ಶ್ರೀಗಳು ಹೇಳಿದರು.
ಡಿ.ಕೆ.ಶಿವಕುಮಾರ್ ರವರ ಮೇಲೆ ಸಮುದಾಯ ಆಪಾವಾದ ಪ್ರೀತಿ ವಿಶ್ವಾಸವನ್ನು ಹೊಂದಿದೆ ಅವರು ಸಹಾ ನಮ್ಮ ಸಮುದಾಯದ ಮೇಲೆ ವಿಶ್ವಾಸವನ್ನು ಹೊಂದಿದ್ದಾರೆ. ನಮ್ಮಲ್ಲಿ ಯಾವುದೇ ದ್ವೇಷ ಇಲ್ಲ, ಆದರೆ ಸಮುದಾಯ ಎಂದು ಬಂದಾಗ ಮಾತ್ರ ನಾವು ಭಕ್ತರ ಪರವಾಗಿ ಇರಬೇಕಿದೆ. ಶಿವಕುಮಾರ್ ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕು ಸದನದ ಕಡತದಿಂದ ಆಡಿದ ಮಾತನ್ನು ವಾಪಾಸ್ಸು ಪಡೆಯಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಭೋವಿ ಸಮಾಜದ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಭಾಗವಹಿಸಿದ್ದರು.