ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಉದಯದ ಪೂಜೆ ಉತ್ಪತ್ತಿಗೆ ಬೀಜ.
ಮಧ್ಯಾಹ್ನದ ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ.
ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜ.
ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು
ಸದಾ ಸನ್ನಹಿತವಾಗಿ ಮಾಡುವ ಪೂಜೆ
ಉತ್ಪತ್ತಿ ಸ್ಥಿತಿ ಲಯಂಗಳ ಮೀರಿದ ನಿತ್ಯ ನಿರ್ಮಲ ಪೂಜೆ ಕಾಣಾ.
ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
-ತೋಂಟದ ಸಿದ್ಧಲಿಂಗ ಶಿವಯೋಗಿಗಳು






























