ಮಂಗಳೂರು: ಗಾಳಿಯಲ್ಲಿ ತೇಲುತ್ತಾ ನಿಮ್ಮ ಪ್ರೀತಿಪಾತ್ರರೊಂದಿಗೆ ಊಟ ಮಾಡುವ ಅವಕಾಶ ಮಂಗಳೂರಲ್ಲೂ ಈಗ ಲಭ್ಯ. ಸ್ಕೈ ಡೈನಿಂಗ್ ಮೂಲಕ ನೀವು ನೆಲದಿಂದ 50 ಅಡಿಗೂ ಹೆಚ್ಚು ಎತ್ತರದಲ್ಲಿ ರುಚಿಕರ ಭೋಜನ ಸವಿಯಬಹುದು.
ವಿಶ್ವ ಪ್ರಸಿದ್ಧ ತಾಣ ಇಂದು ಮರವಂತೆ ಬೀಚ್‌ನಲ್ಲಿ ಶುಕ್ರವಾರದಿಂದ (ನ.29) ವಿನೂತನವಾದ ಸ್ಕೈ ಡೈನಿಂಗ್ ಆರಂಭಗೊಂಡಿದೆ. ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್ ತಾಣವಾಗಿದ್ದು, ಈ ಸ್ಕೈ ಡೈನಿಂಗ್ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈಗ ಈ ಸ್ಕೈ ಡೈನಿಂಗ್‌ನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 90 – 100 ಮೀಟರ್ ಎತ್ತರದಲ್ಲಿ ಕುಳಿತು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರ ವೀಕ್ಷಿಸುತ್ತಾ ನಿಮ್ಮ ಕುಟುಂಬದ 5ರಿಂದ 9 ಜನರೊಂದಿಗೆ ಆಕಾಶದಲ್ಲಿ ತೇಲುತ್ತಾ ಊಟ ಸವಿಯಬಹುದು.
ಇಲ್ಲಿನ ಟೇಬಲ್‌ಗಳು 360 ಡಿಗ್ರಿಯಲ್ಲಿ ತಿರುಗಲಿದ್ದು, ಇದರಿಂದ ಎಲ್ಲ ಭಾಗಗಳ ವೈಮಾನಿಕ ದೃಶ್ಯ ಕಣ್ತುಂಬಿಕೊಳ್ಳಬಹುದು. ಒಬ್ಬರಿಗೆ 500 ರೂ. ನಿಗದಿಪಡಿಸಲಾಗಿದೆ. ಈ ಕುರಿತು skydiningmangalore ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.