ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರಿಗೆ ಗುಡ್ ನ್ಯೂಸ್. ಸಮೀಕ್ಷೆಯ ಗಡುವನ್ನು ವಿಸ್ತರಿಸಲಾಗಿದ್ದು, NOV 30 ರವರೆಗೆ ಆನ್ಲೈನ್ ಗಣತಿಯಲ್ಲಿ ಭಾಗಿಯಾಗಬಹುದಾಗಿದೆ.
ಸಮೀಕ್ಷೆ OCT 31ಕ್ಕೆ ಮುಕ್ತಾಯಗೊಂಡಿತ್ತು. 89.48% ಎಣಿಕೆಯಾಗಿದ್ದು, 4.22 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದವು. ಆದಾಗ್ಯೂ, ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗಾಗಿ ಈಗ ಮತ್ತೆ ಅವಧಿ ವಿಸ್ತರಿಸಲಾಗಿದೆ.































