South Central Railway : ಸುರಕ್ಷತಾ ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗುತ್ತಿದೆ..!

ಹುಬ್ಬಳ್ಳಿ : ಗುಂಟೂರು ವಿಭಾಗದಲ್ಲಿ ಸುರಕ್ಷತಾ ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.

1. ರೈಲು ಸಂಖ್ಯೆ 17329 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೇಸ್ ರೈಲನ್ನು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 1 ರವರೆಗೆ ಮತ್ತೆ ರದ್ದುಪಡಿಸಲಾಗುತ್ತಿದೆ.

2. ರೈಲು ಸಂಖ್ಯೆ 17330 ವಿಜಯವಾಡ-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೇಸ್ ರೈಲನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಮತ್ತೆ ರದ್ದುಪಡಿಸಲಾಗುತ್ತಿದೆ.

Advertisement

II. ರೈಲುಗಳ ಮಾರ್ಗ ಬದಲಾವಣೆ

ವಿಜಯವಾಡ ವಿಭಾಗದಲ್ಲಿ ಸುರಕ್ಷತಾ ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಈ ಕೆಳಗಿನ ರೈಲುಗಳು ಬದಲಾದ ಮಾರ್ಗದ ಮೂಲಕ ಸಂಚರಿಸಲಾಗುತ್ತಿವೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

1. ರೈಲು ಸಂಖ್ಯೆ 12835 ಹಟಿಯಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಬೈ-ವಿಕ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೇಸ್ ರೈಲು 24.09.23 ಮತ್ತು 26.09.23 ರಂದು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

2. ರೈಲು ಸಂಖ್ಯೆ 12889 ಟಾಟಾನಗರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೇಸ್ ರೈಲು 29.09.23 ರಂದು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

III. ರೈಲು ತಡವಾಗಿ ಆರಂಭ

ಸಿಕಂದರಾಬಾದ್ ವಿಭಾಗದ ಮಾಕುಡಿ-ಸಿರಪುರ ಟೌನ್- ಸಿರಪುರ ಕಾಘಜನಗರ ನಿಲ್ದಾಣಗಳ ನಡುವಿನ 3ನೇ ಲೈನಿನ ಮಾರ್ಗದಲ್ಲಿನ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ರೈಲು ಸಂಖ್ಯೆ 22691 ಕೆ.ಎಸ್.ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೇಸ್ ರೈಲು 25.09.23 ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ 180 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ ಹಾಗೂ 60 ನಿಮಿಷಗಳ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

IV. ಯಶವಂತಪುರ-ಕಾಚಿಗುಡ (16569/16570) ರೈಲುಗಳು ತಾತ್ಕಾಲಿಕ ರದ್ದು.

ಯಶವಂತಪುರ ಮತ್ತು ಕಾಚಿಗುಡ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ (16569/16570) ಎಕ್ಸ್‌ಪ್ರೇಸ್ ರೈಲುಗಳನ್ನು ಸೆಪ್ಟೆಂಬರ್ 29 ರಿಂದ ಯಶವಂತಪುರ ಮತ್ತು ಸೆಪ್ಟೆಂಬರ್ 30 ರಿಂದ ಕಾಚಿಗುಡ ನಿಲ್ದಾಣದಿಂದ ಅನಿವಾರ್ಯ ಕಾರಣಗಳಿಂದಾಗಿ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗುತ್ತಿದೆ.

V. ಕೆಲವು ರೈಲುಗಳು ರದ್ದು

ವಿಜಯವಾಡ ವಿಭಾಗದ ಬಾಪಟ್ಲಾ ನಿಲ್ದಾಣದ 3ನೇ ಲೈನ್‌ನ ಕಾರ್ಯಾರಂಭಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಅವುಗಳ ಮಾಹಿತಿ ಈ ಕೆಳಗಿನಂತಿದೆ.

1. ರೈಲು ಸಂಖ್ಯೆ 06509 ಕೆ.ಎಸ್.ಆರ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 25.09.23, 02.10.23 ಮತ್ತು 09.10.23 ರಂದು ರದ್ದುಪಡಿಸಲಾಗುತ್ತಿದೆ.

2. ರೈಲು ಸಂಖ್ಯೆ 06510 ದಾನಾಪುರ-ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 27.09.23, 04.10.23 ಮತ್ತು 11.10.23 ರಂದು ರದ್ದುಪಡಿಸಲಾಗುತ್ತಿದೆ.

3. ರೈಲು ಸಂಖ್ಯೆ 08543 ವಿಶಾಖಪಟ್ಟಣಂ-ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 24.09.23, 01.10.23 ಮತ್ತು 08.10.23 ರಂದು ರದ್ದುಪಡಿಸಲಾಗುತ್ತಿದೆ.

4. ರೈಲು ಸಂಖ್ಯೆ 08544 ಬೆಂಗಳೂರು ಕಂಟೋನ್ಮೆಂಟ್-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 25.09.23, 02.10.23 ಮತ್ತು 09.10.23 ರಂದು ರದ್ದುಪಡಿಸಲಾಗುತ್ತಿದೆ.

5. ರೈಲು ಸಂಖ್ಯೆ 03259 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 26.09.23 ಮತ್ತು 03.10.23 ರಂದು ರದ್ದುಪಡಿಸಲಾಗುತ್ತಿದೆ.

6. ರೈಲು ಸಂಖ್ಯೆ 03260 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 28.09.23 ಮತ್ತು 05.10.23 ರಂದು ರದ್ದುಪಡಿಸಲಾಗುತ್ತಿದೆ.

7. ರೈಲು ಸಂಖ್ಯೆ 03247 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 28.09.23 ಮತ್ತು 05.10.23 ರಂದು ರದ್ದುಪಡಿಸಲಾಗುತ್ತಿದೆ.

8. ರೈಲು ಸಂಖ್ಯೆ 03248 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 30.09.23 ಮತ್ತು 07.10.23 ರಂದು ರದ್ದುಪಡಿಸಲಾಗುತ್ತಿದೆ.

9. ರೈಲು ಸಂಖ್ಯೆ 03245 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 27.09.23 ಮತ್ತು 04.10.23 ರಂದು ರದ್ದುಪಡಿಸಲಾಗುತ್ತಿದೆ.

10. ರೈಲು ಸಂಖ್ಯೆ 03246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 29.09.23 ಮತ್ತು 06.10.23 ರಂದು ರದ್ದುಪಡಿಸಲಾಗುತ್ತಿದೆ.

11. ರೈಲು ಸಂಖ್ಯೆ 03241 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 29.09.23 ಮತ್ತು 06.10.23 ರಂದು ರದ್ದುಪಡಿಸಲಾಗುತ್ತಿದೆ.

12. ರೈಲು ಸಂಖ್ಯೆ 03242 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 01.10.23 ಮತ್ತು 08.10.23 ರಂದು ರದ್ದುಪಡಿಸಲಾಗುತ್ತಿದೆ.

13. ರೈಲು ಸಂಖ್ಯೆ 03251 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಬೈ-ವಿಕ್ಲಿ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 24.09.23, 25.09.23, 01.10.23, 02.10.23, 08.10.23 ಮತ್ತು 09.10.23 ರಂದು ರದ್ದುಪಡಿಸಲಾಗುತ್ತಿದೆ.

14. ರೈಲು ಸಂಖ್ಯೆ 03252 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಬೈ-ವಿಕ್ಲಿ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 26.09.23, 27.09.23, 03.10.23, 04.10.23, 10.10.23 ಮತ್ತು 11.10.23 ರಂದು ರದ್ದುಪಡಿಸಲಾಗುತ್ತಿದೆ.

15. ರೈಲು ಸಂಖ್ಯೆ 00637 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಓಖ್ಲಾ ಸಾಪ್ತಾಹಿಕ ಪಾರ್ಸೆಲ್ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 24.09.23, 01.10.23 ಮತ್ತು 08.10.23 ರಂದು ರದ್ದುಪಡಿಸಲಾಗುತ್ತಿದೆ.

16. ರೈಲು ಸಂಖ್ಯೆ 00638 ಓಖ್ಲಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಪಾರ್ಸೆಲ್ ವಿಶೇಷ ಎಕ್ಸ್‌ಪ್ರೇಸ್ ರೈಲನ್ನು 27.09.23, 04.10.23 ಮತ್ತು 11.10.23 ರಂದು ರದ್ದುಪಡಿಸಲಾಗುತ್ತಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement