ಕುಡಿದ ನಶೆಯಲ್ಲಿ ಸಿಗರೇಟ್ ಸೇದಿ ಉಳಿದ ತುಂಡನ್ನು ಬಟ್ಟೆ ಮೇಲೆ ಹಾಕಿದ್ದ ಹಿನ್ನೆಲೆ ಸಿಗರೇಟ್ ಕಿಡಿ ತಗುಲಿ ಮನೆ ಹೊತ್ತಿ ಹುರಿದು ಬೆಂಕಿಯ ಜ್ವಾಲೆಗೆ ವ್ಯಕ್ತಿ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.
ಘಟನೆ ದೊಡ್ಡಬಳ್ಳಾಪುರ ನಗರದ ಕನ್ನಮಂಗಲ ಕಾಲೋನಿಲ್ಲಿ ನಡೆದಿದೆ. ಉದಯ್ ಕುಮಾರ್ (35) ಎಂಬಾತ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ವಿಪರೀತ ಮದ್ಯ ಸೇವಿಸಿ ಮನೆಯಲ್ಲಿರುವ ಬಟ್ಟೆಗಳನ್ನ ಒಂದು ಕಡೆ ಗುಡ್ಡೆ ಹಾಕಿದ್ದ ಹಿನ್ನೆಲೆ ಕುಡಿದ ಅಮಲಿನಲ್ಲಿ ಬಿಸಾಕಿದ ಸಿಗರೇಟ್ ನ ಕಿಡಿ ಬಟ್ಟೆಯ ಮೇಲೆ ಬಿದ್ದಿದ್ದು ಮನೆ ಪೂರ್ತಿ ಬೆಂಕಿ ಹತ್ತಿ ಉರಿದಿದೆ. ಕುಡಿದ ನಶೆಯಲ್ಲಿ ಪ್ರಜ್ಞೆ ತಪ್ಪಿ ಮಲಗಿದ್ದ ಉದಯ್ ಕುಮಾರ್ ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.