ಊಟದ ನಂತರ ವೀಳ್ಯದೆಲೆ ತಿನ್ನುವುದರಿಂದ ವಿಶೇಷ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.
ಹೌದು, ವೀಳ್ಯದೆಲೆಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಕಂಡುಬರುವುದರಿಂದ, ಇವು ದೇಹದಲ್ಲಿ ಕಂಡುಬರುವ ಹಾನಿಕಾರಕ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಹೊಟ್ಟೆಯ ಪಿಹೆಚ್ ಮಟ್ಟವನ್ನು ಸರಿಪಡಿಸಿ ಗ್ಯಾಸ್ಟ್ರಿಕ್ ನೋವನ್ನು ಇಲ್ಲವಾಗಿಸುತ್ತದೆ. ಊಟ ಆದ ನಂತರ ಅರ್ಧ ಗಂಟೆ ಬಿಟ್ಟು ಪಾನ್ ಅಥವಾ ಎಲೆ ಅಡಿಕೆ ಹಾಕಿಕೊಳ್ಳುವುದು ಒಳ್ಳೆಯದು.