ಶ್ರೀ ಕಬೀರಾನಂದ ಆಶ್ರಮ : ಫೆ. 22 ರಿಂದ 27ರವರೆಗೆ 95ನೇ ಮಹಾ ಶಿವರಾತ್ರಿ ಮಹೋತ್ಸವ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದ ಆಶ್ರಮದವತಿಯಿಂದ ನಡೆಯುವ 95ನೇ ಮಹಾ ಶಿವರಾತ್ರಿ ಮಹೋತ್ಸವವೂ ಫೆ. 22 ರಿಂದ 27ರವರೆಗೆ ನಡೆಯಲಿದೆ ಎಂದು ಕಬೀರಾನಂದಾಶ್ರಮ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದಾಶ್ರಮದ ಆವರಣದಲ್ಲಿನ ಸಭಾಂಗಣದಲ್ಲಿ 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಾಶಿವರಾತ್ರಿ ಮಹೋತ್ಸವ ಪೌರಾಣಿಕ ಹಿನ್ನಲೆಯಿರುವ ಮಹಾಶಿವರಾತ್ರಿಯನ್ನು ನಾಡಿನಾದ್ಯಂತ ವಿಜೃಂಭಣೆಯಿಂದ ಶಿವಭಜನೆ, ಶಿವಪೂಜೆ ಮತ್ತು ಉಪವಾಸ, ನಾನಾ ರೀತಿಯಲ್ಲಿ ಭಕ್ತರು ಆಚರಿಸುವ ಈ ಮಹಾಶಿವರಾತ್ರಿಯು ತನ್ನದೇ ಅನ್ನ ವೈಶಿಷ್ಟ್ಯವನ್ನು ಹೊಂದಿದೆ. ಶ್ರೀ ಜಗದ್ಗುರು ಸಿದ್ದಾರೂಢ ಮಹಾತ್ಮರು ನಾನಾ ಪವಾಡಗಳ ಮೂಲಕ ಜಗತ್ವಸಿದ್ದರಾಗಿ ತಮ್ಮ ಶಿಷ್ಯ ಸಮೂಹವನ್ನು ಶಿವಭಜನೆ, ಶಿವನಾಮ ಸಪ್ತಾಹ ಆಚರಿಸುವ ಮೂಲಕ ಆಧ್ಯಾತ್ಮ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದರು.

ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಶ್ರೀ ಸದ್ಗುರು ಕಬೀರಾನಂದÀ ಮಹಾಸ್ವಾಮಿಗಳು, ಗುರುಗಳ ಆದೇಶದಂತೆ, ಚಿತ್ರದುರ್ಗದಲ್ಲಿ ಮಾನವರ ಕಲ್ಯಾಣಕ್ಕಾಗಿ ಸ್ಥಾಪಿಸಿದ ಅದೈತ, ಜಾತ್ಯತೀತ ಸಂಪ್ರದಾಯ ಆಶ್ರಮವೇ ಶ್ರೀ ಸದ್ಗುರು ಕಬೀರಾನಂದ ಆಶ್ರಮ, ಗುರುಗಳ ಪರಂಪರೆಯಂತೆ ಪ್ರತಿ ವರ್ಷವು ಶಿವನಾಮ ಸಪ್ತಾಹವನ್ನು ಮಹಾಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ರೀಮಠದ ವೈಶಿಷ್ಟ್ಯವಾಗಿದೆ ಎಂದರು.

ಶ್ರೀ ಮಠವು ಚಾರಿತ್ರಿಕ ಹಿನ್ನಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ಶಿವನಾಮೆ ಸಪ್ತಾಹವನ್ನು ಜಾತಿ-ಮತಗಳ ಚೌಕಟ್ಟನ್ನು ಮೀರಿ, ನಾಡಿನ ಜನರ ಭಾವೈಕ್ಯ ಸಾಧನವನ್ನಾಗಿ ಸಾಧಿಸುತ್ತಿರುವ ಇಂದಿನ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ಅದೈತ ಸಂಪ್ರದಾಯದಂತೆ ನಡೆದು ಬಂದ ಪರಂಪರೆಯನ್ನು ಉಳಿಸಿಕೊಂಡು, ಶಿವನಾಮ ಸಂಕೀರ್ತನೆ ಮಾಡಿಸುವುದು, ನಾಡಿನ ಜಗದ್ಗುರುಗಳನ್ನು, ಮಠಾಧಿಪತಿಗಳನ್ನು,ಸಾಹಿತಿಗಳನ್ನು,ವಿಚಾರವಂತರನ್ನು,ಬರಮಾಡಿಕೊಳ್ಳುವುದರೊಂದಿಗೆ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಈ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗನ್ನು ತಂದಿರುತ್ತಾರೆ.

ಫೆ. 20 ರಿಂದ ಶಿವನಾಮ ಸಪ್ತಾಹವೂ ಪ್ರಾರಂಭವಾಗಿದ್ದು ಬ್ರಾಹ್ಮೀ ಮಹೂರ್ತದಲ್ಲಿ ಗೋ ಪೂಜೆಯನ್ನು ಮಾಡುವುದರ ಮೂಲಕ 95ನೇ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಇದ್ದಲ್ಲದೆ ಸಪ್ತಾಹ ಪ್ರಾರಂಭದಿಂದ ಅಂತಿಮ ದಿನದವರೆಗೂ ಸಹಾ ಭಕ್ತಾಧಿಗಳಿಂದ ಶಿವನಾಮ ಸ್ಮರಣೆ ಕಾರ್ಯಕ್ರಮ ದಿನದ 24 ಗಂಟೆಯೂ ನಡೆಯಲಿದೆ. ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳವರ ದಿವ್ಯ ಸಮ್ಮುಖದಲ್ಲಿ ಫೆ. 22 ರಿಂದ 27 ರವರೆಗೆ 95ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಶ್ರೀ ಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾವೇದಿಕೆಯಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 6.30ಕ್ಕೆ ನಾಡಿನ ವಿದ್ವಾಂಸರು, ಸಾಹಿತಿಗಳು, ರಾಜಕಾರಣಿಗಳು ವಿವಿಧ ಮಠಾಧೀಶರು, ಕಲಾವಿದರು ಸೇರಿದಂತೆ ಹಲವಾರು ಜನತೆ ಉಪನ್ಯಾಸವನ್ನು ನೀಡಲಿದ್ದಾರೆ, ಇದಾದ ನಂತರ ಪ್ರತಿದಿನ ರಾತ್ರಿ ಕಿರೀಟ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ಫೆ. 22 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೃಂಗೇರಿಯ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ್ ಶ್ರೀಗಳು, ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ್ ಶ್ರೀಗಳು ಹಾಗೂ ಚಳ್ಳಕೆರೆಯ ಶ್ರೀ ಸದ್ಗುರು ನರಹರಿ ಪೀಠದ ಪೀಠಾಧಿಪತಿಗಳಾದ ಶ್ರೀ ರಾಜಾರಾಮ್ ಶ್ರೀಗಳು ವಹಿಸಲಿದ್ದಾರೆ. ಸಭಾಮಂಟಪವನ್ನು ಜಿಲ್ಲಾ ಸಚಿವರಾದ ಡಿ.ಸುಧಾಕರ್ ಕಾರ್ಯಕ್ರಮವನ್ನು ಶಾಸಕರಾದ ಕೆ.ಸಿ.ವಿರೇಂದ್ರರವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಆಯುಕ್ತರಾದ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಫೆ. 23 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಬಸವಕುಮಾರ ಶ್ರೀಗಳು, ಹಂಪಿಯ ಹೇಮಕೂಟದ ಶಿವರಾಮಾವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಶ್ರೀಗಳು ವಹಿಸಲಿದ್ದಾರೆ. ಮಾಜಿ ಸಚಿವರಾಧ ಹೆಚ್.ಅಂಜನೇಯ, ಅದಿಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ನಗರಸಭಾ ಆಧ್ಯಕ್ಷರಾದ ಶ್ರೀಮತಿ ಸುಮಿತ್ರ ರಾಘವೇಂದ್ರ, ಪೌರಾಯುಕ್ತರಾದ ಶ್ರೀಮತಿ ರೇಣುಕಾ, ಬಿಜೆಪಿ ಮುಖಂಡರಾದ ಶ್ರೀಮತಿ ರೇಖಾ, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಫೆ. 24 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಡಾ.ನಿರ್ಮಲಾನಂದಸ್ವಾಮಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ಪೀಠದ ಗೋಸಾಯಿಮಠದ ಪೀಠಾಧ್ಯಕ್ಷರಾದ ಶ್ರೀ ಮಂಜುನಾಥ ಭಾರತಿ ಶ್ರೀಗಳು ಹಾಗೂ ಉದಯಚಲದ ಶ್ರೀ ಸದ್ಗುರು ಸೇವಾಶ್ರಮ ಟ್ರಸ್ಟ್ನ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಶ್ರೀಗಳು ವಹಿಸಲಿದ್ದಾರೆ. ಸಂಸದರಾದ ಗೋವಿಂದ ಕಾರಜೋಳ, ಐಜಿಪಿ ರವಿಕಾಂತೇಗೌಡ, ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಫೆ. 25ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೂಸದುರ್ಗದ ಶೀಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದ ಶ್ರೀಗಳು, ಹುಬ್ಬಳ್ಳಿಯ ವಿಜಯಪುರದ  ಶ್ರೀ ಷಣ್ಮುಖಾರೂಢ ಮಠದ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು, ಹೆಬ್ಬಾಳ್ನ  ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಶ್ರೀಗಳು ಹಾಗೂ ಬಾಗಲಕೋಟೆಯ ಕೌದಿಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ವಹಿಸಲಿದ್ದಾರೆ. ಶಾಸಕರಾದ ರಘುಮೂರ್ತಿ, ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಸೂರಜ್ ಹೆಗ್ಡೆ, ಜಿಲ್ಲಾಧ್ಯಕ್ಷರಾದ ಶಿವಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟೇಶ್, ನಗರಾಭಿವೃದ್ದಿನ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ಪೀರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಫೆ. 26ರ ಮಧ್ಯಾಹ್ನ 2.30ರಿಂದ ಶ್ರೀ ಸದ್ಗುರು ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ. ಇದರಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿದ್ದು 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ವಿಜಯಕುಮಾರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀಗಳು ಹಾಗೂ ಹಾವೇರಿಯ ಕೂಸನೂರಿನ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು ವಹಿಸಲಿದ್ದಾರೆ. ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಎಂ. ಚಂದ್ರಪ್ಪ, ಉಮೇಶ್ ಕಾರಜೋಳ, ನಗರಸಭಾ ಸದಸ್ಯರಾದ ವೆಂಕಟೇಶ್, ಮಂಜುನಾತ್ ಗೊಪ್ಪೆ, ಭಾಸ್ಕರ್, ರಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಫೆ. 27ರ ಬೆಳಿಗ್ಗೆ ಬ್ರಾಹ್ಮೀ ಮಹೋರ್ತದಲ್ಲಿ ಶಿವನಹಿಮ್ನಾ ಸ್ತೂತ್ರ ವಿಭೂತಿ ಸ್ನಾನದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದೆ, ಸಂಜೆ 5.30ರಿಂದ ಸನ್ಯಾಸಿ ವಿಧಿಯಂತೆ ಕೌದಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಬಳಗೋಡಿನ ಎಸಿಎಂ ಮಠದ ಬಿಜಿಎಸ್ ಗ್ರೂಪ್ನ ವ್ಯವಸ್ಥಾಪಕ ನಿದೇಶಕರಾದ ಪ್ರಕಾಶನಾಥ್ ಶ್ರೀಗಳು, ನಾಗಲಕೋಟೆಯ ಸದ್ಗುರು ಶ್ರದ್ದಾನಂದ ಆಶ್ರಮದ ಶ್ರೀ ಕೈಲಾಸಪತಿನಾಥ್ ಶ್ರೀಗಳು, ಭಾಗವಹಿಸಲಿದ್ದಾರೆ.

ಗೋಷ್ಟಿಯಲ್ಲಿ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು, 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಬದರಿನಾಥ್, ಸದಸ್ಯರಾದ ಓಂಕಾರ್, ಮಂಜುನಾಥ್ ಗುಪ್ತ, ಉತ್ಸವ ಸಮಿತಿ ಸದಸ್ಯರಾದ ಗೋಪಾಲಸ್ವಾಮಿ ನಾಯ್ಕ್, ಸತೀಶ್, ನಾಗರಾಜ್ ಸಂಗಂ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನ ಮೂರ್ತಿ, ಯೋಗಿಶ್, ರೂಪ ಜರ್ನಾರ್ಧ£,ï ಸೋಮನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon