‘ಭಾರತೀಯ ಅಂಚೆ ಇಲಾಖೆ’ಯಲ್ಲಿ 65,200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಜಾಲವನ್ನು ಬಲಪಡಿಸುವುದು ಮತ್ತು ದೇಶಾದ್ಯಂತ ನಾಗರಿಕರಿಗೆ ಸೇವಾ ವಿತರಣೆಯನ್ನು ಸುಧಾರಿಸುವುದು ಈ ನೇಮಕಾತಿ ಅಭಿಯಾನದ ಗುರಿಯಾಗಿದೆ.
ಭಾರತ ಅಂಚೆ ಹುದ್ದೆಗಳ ವಿವರ 2025 : ಉದ್ಯೋಗ ಸ್ಥಳ : ಭಾರತದಾದ್ಯಂತ. ಹುದ್ದೆಗಳ ಸಂಖ್ಯೆ : ಒಟ್ಟು 65,200 ಹುದ್ದೆಗಳು.
ಭಾರತ ಅಂಚೆ ಜಿಡಿಎಸ್‌ಗೆ ಅರ್ಹತಾ ಮಾನದಂಡಗಳು : ಶೈಕ್ಷಣಿಕ ಅರ್ಹತೆ :
ಮಾನ್ಯತೆ ಪಡೆದ ಮಂಡಳಿಯಿಂದ SSLC ಪಾಸಾಗಿರಬೇಕು (Matriculation) ಮೂಲ ಕಂಪ್ಯೂಟರ್ ಜ್ಞಾನ (Computer knowledge) ಅತ್ಯಗತ್ಯ. ರಾಜ್ಯ/ಪ್ರದೇಶದ (State/Region) ಸ್ಥಳೀಯ ಭಾಷೆ (Language) ಯಲ್ಲಿ ಪ್ರಾವೀಣ್ಯತೆ ಅಗತ್ಯವಿದೆ. ಸೈಕ್ಲಿಂಗ್ ಕೌಶಲ್ಯ (Cycling skills) ಕ್ಕೆ ಆದ್ಯತೆ ನೀಡಲಾಗುತ್ತದೆ.
ವಯಸ್ಸಿನ ಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು : 18 ವರ್ಷಗಳು.
ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು : 40 ವರ್ಷಗಳು.
SC/ST : 5 ವರ್ಷಗಳು.
OBC : 3 ವರ್ಷಗಳು.
ಪಿಡಬ್ಲ್ಯೂಡಿ (PWD) : 10 ವರ್ಷಗಳು.
ಆಯ್ಕೆ ಪ್ರಕ್ರಿಯೆ :
ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಕಿರುಪಟ್ಟಿ. 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಕೆ. ದಾಖಲೆ ಪರಿಶೀಲನೆ. ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆ (ಅಗತ್ಯವಿದ್ದರೆ).
ಅರ್ಜಿ ಶುಲ್ಕಗಳು :
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ : ರೂ. 100/-
ಎಸ್‌ಸಿ/ಎಸ್‌ಟಿ/ಮಹಿಳೆ/ಪಿಡಬ್ಲ್ಯೂಡಿ : ಯಾವುದೇ ಶುಲ್ಕ ಇಲ್ಲ.
indiapostgdsonline.gov.in ಪೋರ್ಟಲ್‌ಗೆ ಭೇಟಿ ನೀಡಿ.
ಹೊಸ ಬಳಕೆದಾರರಿಗಾಗಿ ನೋಂದಣಿ link ನ್ನು Click ಮಾಡಿ ನಿಮ್ಮ ಮೂಲ ವಿವರಗಳನ್ನು ನಮೂದಿಸಿ (Name, date of birth, email ID and mobile number)̤ ̤ನೋಂದಣಿಯ ನಂತರ, ನಿಮ್ಮ ರುಜುವಾತುಗಳನ್ನು ಬಳಸಿಕೊಂಡು Login ಮಾಡಿ.
ವೈಯಕ್ತಿಕ, ಶೈಕ್ಷಣಿಕ ಮತ್ತು ಸಂಪರ್ಕ ವಿವರ (Personal, educational and contact details) ಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು Upload ಮಾಡಿ.
ಲಭ್ಯವಿರುವ ಪಾವತಿ ವಿಧಾನಗಳನ್ನು ಬಳಸಿಕೊಂಡು Online ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
ನಮೂದಿಸಿದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ದೃಢೀಕರಣ ಪುಟವನ್ನು Download ಮಾಡಿ.
ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ ದಿನಾಂಕ : 01, ಫೆಬ್ರವರಿ 2025.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 03, ಮಾರ್ಚ್ 2025.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28, ಮಾರ್ಚ್ 2025.