SSLC Result 2025ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಅಂದರೆ 02-05-2025 ರಂದು ಪ್ರಕಟಿಸಲಿದ್ದು, ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗೆ ನೇರವಾದ ಲಿಂಕ್ ನೀಡಲಾಗಿದೆ.
ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ SSLC Result 2025
ಈ ಬಾರಿಯ 10ನೇ ತರಗತಿಯ ಪರೀಕ್ಷೆಯು 21 ಮಾರ್ಚ್ ಇಂದ 04 ಎಪ್ರಿಲ್ ತನಕ ನಡೆಸಲಾಗಿದ್ದು, ಈಗಾಗಲೇ ಎಲ್ಲಾ ಪತ್ರಿಕೆಗಳ ಮೌಲ್ಯಮಾಪನ ಮುಗಿಸಿ, ಅದರಂತೆ ಈಗ ಎಸ್ಎಸ್ಎಲ್ ಸಿ ಪರೀಕ್ಷೆ-1 ಫಲಿತಾಂಶವನ್ನು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದ್ದು, ಅದರಂತೆ ಮಾನ್ಯ ಶಿಕ್ಷಣ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.30 ಕ್ಕೆ ಸುದ್ದಿಘೋಷ್ಠಿ ಕರೆಯಲಾಗಿದೆ.
ಇನ್ನು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮೇ 02 ರಂದು ಮಧ್ಯಾಹ್ನ 12.30 ರ ನಂತರ ಈ ಕೆಳಗಿನ ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದಾಗಿದೆ.
SSLC Result 2025 ನಿಮ್ಮ ರಿಸಲ್ಟ್ ಈ ಲಿಂಕ್ ಮೂಲಕ ಚೆಕ್ ಮಾಡಿ
ನೀವು ನಿಮ್ಮ/ನಿಮ್ಮ ಮಕ್ಕಳ ಫಲಿತಾಂಶ ನೋಡಲು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ( LINK ಕೆಳಗೆ ನೀಡಲಾಗಿದೆ)
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ/Karnataka School Examination and Assessment Board ಮುಖಪುಟ ಕಾಣಸಿಗಲಿದ್ದು, 2025 ಎಸ್ಎಸ್ಎಲ್ ಸಿ ಪರೀಕ್ಷೆ- 1 ರ ಫಲಿತಾಂಶ ಪ್ರಕಟಣೆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ರಿಜಿಸ್ಟರ್ ಸಂಖ್ಯೆ ದಾಖಲಿಸಿ ನಿಮ್ಮ ಫಲಿತಾಂಶ ನೋಡಬಹುದಾಗಿದೆ ಹಾಗೂ ಡೌನ್ಲೋಡ್ ಕೂಡ ಮಾಡಬಹುದಾಗಿದೆ.
https://karresults.nic.in/