ತುಮಕೂರು : ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅನೇಕ ಜೀವಗಳು ಬಲಿಯಾಗಿವೆ. ವಯಸ್ಸಾದವರು ಮಾತ್ರವಲ್ಲದೇ ಮಕ್ಕಳು ಕೂಡ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಪ್ರಕರಣ ನಡೆದಿದ್ದು, 10ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಈ ಘಟನೆ ನಡೆದಿರೋದು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ರಾಹುಲ್ (16) ಮೃತ ವಿದ್ಯಾರ್ಥಿ. ಭೈರಾಪುರ ಗ್ರಾಮದ ಜಯರಾಂ ಪುತ್ರ ರಾಹುಲ್ ಚಿಕ್ಕನಾಯಕನಹಳ್ಳಿ ಪಟ್ಟಣದ ಜಿಎಚ್‌ಎಸ್‌ನಲ್ಲಿ ಹತ್ತನೇ ತರಗತಿ ಓದುತ್ತಿದ್ದ. ಶುಕ್ರವಾರ(ಫೆ.21) ಶಾಲೆಗೆ ಹೋಗಿ ಮನೆಗೆ ಹಿಂದಿರುಗಿದ್ದ. ರಾತ್ರಿ 9:30ರ ಸುಮಾರಿಗೆ ರಾಹುಲ್‌ಗೆ ಎದೆನೋ*ವು ಕಾಣಿಸಿಕೊಂಡಿದೆ.
ತಕ್ಷಣ ಆತನನ್ನು ಪೋಷಕರು ಹುಳಿಯಾರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ರಾಹುಲ್ ಇಹಲೋಕ ತ್ಯಜಿಸಿದ್ದಾನೆ. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.