ಸಾಮಾಜಿಕ ಮಾಧ್ಯಮದಲ್ಲಿ ನಟಿಯ ಕುರಿತ ಸುದ್ದಿಯೊಂದು ಸಂಚಲನ ಮೂಡಿಸುತ್ತಿದೆ. ಸಂದರ್ಶನವೊಂದರಲ್ಲಿ, ಅವರು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಮಾರಾಟ ಮಾಡುವ ಮೂಲಕ 10 ಕೋಟಿ ರೂ. ಗಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅದೂ ಕೇವಲ ಎರಡು ತಿಂಗಳಲ್ಲಿ ಅನ್ನೋದು ಗಮನಿಸಬೇಕಾದ ವಿಚಾರ.
ಗಲಾಟ್ಟಾಗೆ ನೀಡಿದ ಸಂದರ್ಶನವೊಂದರಲ್ಲಿ, ಖುಷಿ ಮುಖರ್ಜಿಗೆ, ಸೆಪ್ಟೆಂಬರ್ 2022 ರಲ್ಲಿ ವೆಬ್ಸೈಟ್ ಮೂಲಕ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಮಾರಾಟ ಮಾಡುವ ಮೂಲಕ ಹತ್ತು ಕೋಟಿ ರೂಪಾಯಿಗಳನ್ನು ಗಳಿಸಿದ್ದೀರಿ ಅಂತ ಮಾತು.. ನಿಜವೋ.. ಸುಳ್ಳೋ..?” ಅಂತ ನಿರೂಪಕ ಪ್ರಶ್ನೆ ಮಾಡಿದ.
ಈ ಪ್ರಶ್ನೆಗೆ ಉತ್ತರಿಸಿದ ನಟಿ, ಅದು ನಿಜ.. ನಾನು ಖುಷಿ ಮುಖರ್ಜಿ ಎಂಬ ಹೆಸರಿನಲ್ಲಿ ಒಂದು ಅಪ್ಲಿಕೇಶನ್ ಕ್ರಿಯೇಟ್ ಮಾಡಿದ್ದೇನೆ.. ಅದು ಇನ್ನೂ ಇದೆ. ಇತ್ತೀಚಿನ ದಿನಗಳಲ್ಲಿ, ಅನೇಕ ದೊಡ್ಡ ನಟಿಯರು ಈ ರೀತಿ ಆಪ್ ಬಳಸಲು ಪ್ರಾರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ.
ಅನೇಕ ಅಭಿಮಾನಿಗಳು ನನ್ನ ಆ ರೀತಿಯ ಫೋಟೋಗಳು ಮತ್ತು ವೀಡಿಯೊಗಳಂತಹ ಅನೇಕ ವಿಷಯಗಳನ್ನು ನೋಡಲು ಅನ್ಲಾಕ್ ಮಾಡುತ್ತಿದ್ದರು. ಒಬ್ಬ ಅಭಿಮಾನಿ ಕೇವಲ ನಾಲ್ಕೈದು ಭೇಟಿಗಳಿಗೆ 1 ಕೋಟಿ 13 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಅವನು ಭಾರತದವನು ಅಲ್ಲ.. ವಿದೇಶಿಗರ ಅಂತ ಮುಖರ್ಜಿ ಹೇಳಿದರು..
ಇತ್ತೀಚಿನ ದಿನಗಳಲ್ಲಿ ಜನರು ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿರುವ ಅದೇ ಫೋಟೋಗಳು ಮತ್ತು ವೀಡಿಯೊಗಳು, ವೆಬ್ ಸರಣಿಯಲ್ಲಿ ನೋಡಿದ್ದಂತಹ ರೀತಿಯಲ್ಲಿಯೇ ನಾನು ನನ್ನ ಫೋಟೋಸ್ ಅಪ್ಲೋಡ್ ಮಾಡ್ತೀನಿ ಅಷ್ಟೇ.. ಅವುಗಳನ್ನೇ ಇನ್ಸ್ಟಾಗ್ರಾಮ್ನಲ್ಲಿಯೂ ಹಂಚಿಕೊಳ್ಳುತ್ತೇನೆ.. ಅಂತ ಖುಷಿ ಹೇಳಿಕೊಂಡರು.