ಬೆಂಗಳೂರು: ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿಯ ಕಿಚ್ಚು ಶುರುವಾಗಿದೆ. ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ನಾಳೆ ರಾಜ್ಯ ಒಕ್ಕಲಿಗ ಸಂಘ ತುರ್ತು ಸಭೆ ಕರೆದಿದೆ. ಸಭೆಯಲ್ಲಿ ರಾಜ್ಯದ ಒಕ್ಕಲಿಗ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ಪಕ್ಷದ ಒಕ್ಕಲಿಗ ಮುಖಂಡರುಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವೂ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದೆ ಈಗ ಆ ವರದಿ ಇಟ್ಟುಕೊಂಡು ಜಾತಿ ಗಣತಿ ವರದಿಯನ್ನ ಸರ್ಕಾರ ಮಂಡಿಸುತ್ತಿರೋದಕ್ಕೆ ಒಕ್ಕಲಿಗ ಸಂಘ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಜಾತಿ ಗಣತಿ ವರದಿಯನ ಇವರು ಮನೆ ಮನೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ, ಜಾತಿಗಣತಿ ಸಮೀಕ್ಷೆ ಲೋಪದೋಷದಿಂದ ಕೂಡಿದೆ ಇದು ಅವೈಜ್ಞಾನಿಕ ವರದಿ ಎಂಬುದು ಒಕ್ಕಲಿಗ ಸಂಘ ಆರೋಪ. ಈ ಕುರಿತಂತೆ ಮಾತನಾಡಿರುವ ಒಕ್ಕಲಿಗ ಸಂಘ ಅಧ್ಯಕ್ಷ ಕೆಂಚ್ಚಪ್ಪ ಗೌಡ, ಈಗ ಮಾಡಿರುವ ಜಾತಿ ಗಣತಿ ವರದಿ ಸರಿಯಿಲ್ಲ ಇದು 10 ವರ್ಷ ಹಳೆಯ ವರದಿ, ಈಗ ಇದನ್ನ ಮಂಡಿಸೋದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ನಮ್ಮಲ್ಲಿ 114 ಉಪಪಂಗಡಗಳು ನಮ್ಮಲ್ಲಿ ಇದೆ ಆದ್ರೆ ಇದನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ರು. ಈಗ ಈ ಹಳೆಯ ವರದಿ ಮಂಡಿಸಿದರೆ ನಮ್ಮ ಸಮುದಾಯಕ್ಕೆ ಸಮಸ್ಯೆ ಆಗಲಿದೆ ಹೀಗಾಗಿ ನಾಳೆ 12 ಗಂಟೆಗೆ ಒಕ್ಕಲಿಗ ಸಮುದಾಯದ ಭವನದಲ್ಲಿ ಒಕ್ಕಲಿಗ ಸ್ವಾಮೀಜಿಗಳು ಸೇರಿದಂತೆ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಎಲ್ಲಾ ರಾಜಕೀಯ ಮುಖಂಡರುಗಳ ಸಭೆ ಕರೆಯಲಾಗಿದೆ.ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು ಆದ್ರೆ ಈಗ ಹತ್ತು ವರ್ಷ ಆಗಿದೆ ಈಗ ಸಮೀಕ್ಷೆ ಮಂಡಿಸೋದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಮಂಡಿಸಲು ಹೊರಟಿರುವ ಜಾತಿ ಗಣತಿ ವರದಿಯ ಬಗ್ಗೆ ಒಕ್ಕಲಿಗ ನಾಯಕರು ಪ್ರಶ್ನೆ ಮಾಡಬೇಕು ಅನ್ನುವ ಕಾರಣಕ್ಕೆ ನಾವು ಸಭೆ ಕರೆದಿದ್ದೇವೆ ಇದ್ರ ಬಗ್ಗೆ ನಮ್ಮ ನಾಯಕರು ಚಕಾರವೆತ್ತುತ್ತಿಲ್ಲ ಹೀಗಾಗಿ ತಿಳುವಳಿಕೆ ಕೊಡಲು ಸ್ವಾಮೀಜಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದಿದ್ದಾರೆ ಅಲ್ದೇ ವೀರಶೈವ ಲಿಂಗಾಯತ ಮುಖಂಡರು ಸ್ವಾಮೀಜಿ ಜೊತೆ ಸಹ ಮಾತಾನಾಡಿದ್ದೇವೆ ಶೀಘ್ರದಲ್ಲೆ ಜಂಟಿ ಸಭೆಯನ್ನು ಕರೆಯಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿಯ ಕಿಚ್ಚು ಮತ್ತೆ ಜೋರಾಗುತ್ತದೆ.
