ನವದೆಹಲಿ: ಬ್ಯಾಂಕ್ ವಂಚನೆ ಕೇಸ್ ನಲ್ಲಿ ಕಾನ್‌ಕಾಸ್ಟ್ ಸ್ಟೀಲ್ & ಪವರ್ ಲಿಮಿಟೆಡ್ ಮತ್ತು ಇತರರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಯುಕೋ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಬೋಧ್ ಕುಮಾರ್ ಗೋಯೆಲ್ ಅವರನ್ನು ನವದೆಹಲಿಯ ಅವರ ನಿವಾಸದಿಂದ ED ಬಂಧಿಸಿದೆ.
ಮೇ 17 ರಂದು ಕೋಲ್ಕತ್ತಾದ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಮೇ 21 ರವರೆಗೆ ಇಡಿ ಕಸ್ಟಡಿಗೆ ನೀಡಲು ಆದೇಶಿಸಿದೆ. ಛತ್ತೀಸ್‌ಗಢ ಮೂಲದ ಕಂಪನಿ CSPL ಗೆ ವಿಸ್ತರಿಸಲಾದ ಸಾಲ ಮಂಜೂರಾತಿಗಳ ಕುರಿತು ಕೇಂದ್ರ ತನಿಖಾ ದಳ (CBI) ದಾಖಲಿಸಿದ FIR ಅನ್ನು ಆಧರಿಸಿ ED ತನಿಖೆ ನಡೆಸುತ್ತಿದೆ.
ಅಸಲು ಮೊತ್ತದ ₹6,210.72 ಕೋಟಿ ಮೊತ್ತದ ಈ ಸಾಲಗಳನ್ನು ಸಾಲಗಾರರ ಗುಂಪು ದುರುಪಯೋಗಪಡಿಸಿಕೊಂಡಿದೆ ಮತ್ತು ವಂಚಿಸಿದೆ ಎಂದು ಆರೋಪಿಸಲಾಗಿದೆ.