ಉತ್ತರ ಪ್ರದೇಶ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಕೆಲವರು ತಮ್ಮ ಮೊದಲ, ಎರಡನೇ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಸಫಲರಾಗುತ್ತಾರೆ ಆದರೆ ಕೆಲವರು ಮೂರು, ನಾಲ್ಕನೇ ಪ್ರಯತ್ನದ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದ ತೃಪ್ತಿ ಕಲ್ಹಾನ್ಸ್ ಅವರ ಯಶೋಗಾಥೆ ಇದು.
ಸಾಮಾನ್ಯವಾಗಿ ಯುಪಿಎಸ್‌ಸಿ ಪರೀಕ್ಷೆಯು ಕೇವಲ ಬುದ್ಧಿವಂತರಿಗೆ ಅಥವಾ ಪುಸ್ತಕದ ಹುಳುಗಳಿಗೆ ಮಾತ್ರ ಎಂಬ ನಂಬಿಕೆಯಿದೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಿವಾಸಿಯಾದ ತೃಪ್ತಿ ಕಲ್ಹಾನ್ಸ್ ಈ ಭ್ರಮೆಯನ್ನು ಸುಳ್ಳಾಗಿಸಿದ್ದಾರೆ.
ಶಾಲೆಯಲ್ಲಿ ಅವರು ಎಂದಿಗೂ ಹೆಚ್ಚಿನ ಅಂಕ ಗಳಿಸಿದವರಲ್ಲ. ಶಾಲಾ ದಿನಗಳಲ್ಲಿ ಎಂದೂ ಟಾಪರ್ ಆಗಿರದ, ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದ ಹುಡುಗಿಯಾಗಿದ್ದರು. ಆದರೂ, ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಿಂದ ಬಿಕಾಂ ಪದವಿ ಪೂರ್ಣಗೊಳಿಸಿದರು.
ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದ ತೃಪ್ತಿ ಅವರು ತಮ್ಮ ಮೊದಲ ಮೂರು ಪ್ರಯತ್ನದಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. 2023ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 199ನೇ ರ‍್ಯಾಂಕ್ ಪಡೆದ ಅವರು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.

































