ಉತ್ತರ ಪ್ರದೇಶ : ಯುಪಿಎಸ್ ಸಿ ಪರೀಕ್ಷಾ ಸಾಧಕರ ಪಟ್ಟಿಯಲ್ಲಿ ದಿಟ್ಟ ಮಹಿಳಾ ಪೊಲೀಸ್ ಎನಿಸಿಕೊಂಡಿರುವ ರೇಣುಕಾ ಮಿಶ್ರಾ ಅವರ ವೃತ್ತಿಜೀವನ ಯಶಸ್ಸಿನ ಬಗ್ಗೆ ತಿಳಿಯೋಣ.
ರೇಣುಕಾ ಮಿಶ್ರಾ 1990ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯ ಅಧ್ಯಕ್ಷರಾಗುವ ಮೊದಲು ಅವರು ಯುಪಿ ಪೊಲೀಸ್ ಡಿಜಿಪಿ ಆಗುವ ಸ್ಪರ್ಧೆಯಲ್ಲಿದ್ದರು.ಹಿರಿತನದ ಕ್ರಮದಲ್ಲಿ ಉತ್ತರ ಪ್ರದೇಶ ಸರ್ಕಾರ 2021ರಲ್ಲಿಯೇ ಅವರನ್ನು ಡಿಜಿ ಹುದ್ದೆಗೆ ಬಡ್ತಿ ನೀಡಿತ್ತು.
ರೇಣುಕಾ ಮಿಶ್ರಾ ಅವರು ಬಿಕಾಂ ವಾಣಿಜ್ಯ ಮತ್ತು ಅರ್ಥಶಾಸ್ತ್ರದೊಂದಿಗೆ ಎಂಎ ಪೊಲೀಸ್ ಆಡಳಿತವನ್ನು ಮಾಡಿದ್ದಾರೆ. 2005ರಲ್ಲಿ ಡಿಐಜಿ, 2010ರಲ್ಲಿ ಐಜಿ, 2014ರಲ್ಲಿ ಎಡಿಜಿ ಹಾಗೂ 2021ರಲ್ಲಿ ಡಿಜಿ ಹುದ್ದೆಗೆ ಬಡ್ತಿ ಪಡೆದಿದ್ದರು. ಅವರಿಗೆ 26 ಜನವರಿ 2023 ರಂದು DG ಯ ಕಮೆಂಡೇಶನ್ ಡಿಸ್ಕ್ ಪ್ಲಾಟಿನಮ್ ಪ್ರಶಸ್ತಿಯನ್ನು ನೀಡಲಾಯಿತು.
ಐಪಿಎಸ್ ರೇಣುಕಾ ಮಿಶ್ರಾ ಅವರು ಯುಪಿಯ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. 2021 ರಲ್ಲಿ, ಅವರನ್ನು ಬಡ್ತಿ ನೀಡಿ ಡಿಜಿ ಮಾಡಲಾಯಿತು. ಆಗ ರೇಣುಕಾ ಮಿಶ್ರಾ ಅವರಿಗೆ ಎಸ್ ಐಟಿ ಜವಾಬ್ದಾರಿ ವಹಿಸಲಾಗಿತ್ತು.
ರೇಣುಕಾ ಮಿಶ್ರಾ ಅವರು ಇದುವರೆಗೆ ಪೊಲೀಸ್ ಸೇವೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕ, ಭಾರತೀಯ ಪೊಲೀಸ್ ಪದಕ ಮುಂತಾದ ಪ್ರಶಸ್ತಿಗಳು ಸೇರಿವೆ.ರೇಣುಕಾ ಮಿಶ್ರಾ ಬಾಲ್ಯದಿಂದಲೂ ಖಾಕಿ ಸಮವಸ್ತ್ರ ಧರಿಸುವ ಕನಸು ಕಂಡಿದ್ದರು.