ಹರಿಯಾಣ : ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿಯಲ್ಲಿ ಒಂದು ಬಾರಿ ಉತ್ತೀರ್ಣರಾಗುವುದೇ ಕಷ್ಟಸಾಧ್ಯ. ಆದರೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೊದಲಿಗೆ ಐಆರ್ಎಸ್ ಅಧಿಕಾರಿಯಾಗಿ ಪ್ರಸ್ತುತ ಸಹಾಯಕ ಆದಾಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪವನ್ ಕುಮಾರ್ ಗೋಯಲ್ ಅವರ ಯಶೋಗಾಥೆ ಇದು.
ಹರಿಯಾಣದ ಅಂಬಾಲದಲ್ಲಿ ಪವನ್ ಅವರು ಜನಿಸುತ್ತಾರೆ. ಅವರ ತಂದೆ, ಶಲಭ್ ಗೋಯಲ್ ಅವರು ಪಶ್ಚಿಮ ರೈಲ್ವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪವನ್ ಅವರು ಮುಂಬೈನ ಸೇಂಟ್ ಪೀಟರ್ಸ್, ಜಿ.ಡಿ. ಸೋಮಾನಿ ಮೆಮೋರಿಯಲ್ ಶಾಲೆ ಮತ್ತು ದೆಹಲಿಯ ಬಾಲ್ ಭಾರತಿ ಪಬ್ಲಿಕ್ ಸ್ಕೂಲ್ನಂತಹ ಪ್ರಸಿದ್ಧ ಸಂಸ್ಥೆಗಳಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯುವ ಹಂಬಲದಿಂದ ತಮ್ಮ ಐಚ್ಛಿಕ ವಿಷಯವಾಗಿ ಸಮಾಜಶಾಸ್ತ್ರವನ್ನು ಆರಿಸಿಕೊಂಡರು. ಮೊದಲಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 131ನೇ ರ್ಯಾಂಕ್ ಪಡೆದು ಐಆರ್ಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 28ನೇ ರ್ಯಾಂಕ್ ಗಳಿಸುತ್ತಾರೆ.
ಪ್ರಸ್ತುತ ಅವರು ಪವನ್ ಕುಮಾರ್ ಮುಂಬೈನಲ್ಲಿ ಸಹಾಯಕ ಆದಾಯ ತೆರಿಗೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.






























