ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ.
ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.ಕಬ್ಬಿನ ಹಾಲಿನೊಂದಿಗೆ ಕೊಂಚ ಲಿಂಬೆ, ಶುಂಠಿ ಮತ್ತು ಕಲ್ಲುಪ್ಪನ್ನು ಬೆರೆಸಿದರೆ ಇದರ ರುಚಿ ಅಸದಳವಾಗುತ್ತದೆ ಹಾಗೂ ಈ ಸಾಮಾಗ್ರಿಗಳ ಪೋಷಕಾಂಶಗಳೂ ಬೆರೆತು ಪಾನೀನ ಇನ್ನಷ್ಟು ಶಕ್ತಿಯುತವಾಗುತ್ತದೆ.
ಕಬ್ಬಿನ ಹಾಲಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನಂಶವಿದೆ.ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭವಾಗುವ ಜೊತೆಗೇ ಕಾಮಾಲೆ ರೋಗ, ರಕ್ತಹೀನತೆ ಮತ್ತು ಆಮ್ಲೀಯತೆ ಎದುರಾಗುವುದನ್ನೂ ತಡೆಯುತ್ತದೆ. ಅಲ್ಲದೇ ದೇಹವನ್ನು ತಂಪಗಾಗಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ರಸಗಳ ಸ್ರವಿಕೆಗೂ ಪ್ರಚೋದನೆ ನೀಡುತ್ತದೆ.
ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ತಿನ್ನುವುದಿಲ್ಲ, ಆದರೆ, ಕಬ್ಬಿನ ಹಾಲು ಇದಕ್ಕೆ ಅಪವಾದ. ಕಬ್ಬಿನ ಹಾಲಿನಲ್ಲಿ ಸಕ್ಕರೆ ಇದ್ದರೂ ಇದು ನೈಸರ್ಗಿಕವಾಗಿದೆ ಹಾಗೂ ಮಿತ ಪ್ರಮಾಣದಲ್ಲಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಧಿಡೀರನೇ ಏರಿಸುವುದಿಲ್ಲ.
ಆದ್ದರಿಂದ ಮಿತ ಪ್ರಮಾಣದಲ್ಲಿ ಮಧುಮೇಹಿಗಳೂ ಸೇವಿಸಬಹುದು.ಕಬ್ಬಿನ ಹಾಲು ಯಕೃತ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ ಆಹಾರವಾಗಿದೆ ಹಾಗೂ ಕಾಮಾಲೆ ರೋಗಿಗಳಿಗಂತೂ ಕಬ್ಬಿನ ಹಾಲು ದಿನವೂ ಮೂರು ಬಾರಿ ಕುಡಿಯಬೇಕಾದ ಔಷಧಿಯೂ ಆಗಿದೆ.
ಉಳಿದವರಲ್ಲಿ ಯಕೃತ್ ಕ್ಷಮತೆ ಹೆಚ್ಚಿಸಲು ಹಾಗೂ ಕಾಯಿಲೆಗಳಿಂದ ಶೀಘ್ರ ಗುಣಹೊಂದಲು ನೆರವಾಗುತ್ತದೆ.ಸಾಂಕ್ರಾಮಿಕ ರೋಗದ ಹಾವಳಿಯಿಂದ ತಪ್ಪಿಸಿಕೊಳ್ಳಲು ರೋಗ ನಿರೋಧಕ ಶಕ್ತಿ ಎಷ್ಟು ಪ್ರಬಲವಿದ್ದರೂ ಸಾಲದು. ನಿಯಮಿತವಾಗಿ ಒಂದು ಲೋಟ ಕಬ್ಬಿನ ಹಾಲನ್ನು ಸೇವಿಸುತ್ತಾ ಬಂದರೆ ಹಲವಾರು ವೈರಸ್ ಸಂಬಂಧಿತ ರೋಗಗಳಿಂದ ರಕ್ಷಣೆ ಪಡೆಯಬಹುದು.