ಮಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಒಲೈಕೆಯಿಂದ ಹಿಂದುಗಳ ಜೀವನ ದುಸ್ತರವಾಗಿದೆ.
ಜಿಲ್ಲೆಯಲ್ಲಿ ಮತಾಂಧರು ಹಿಂದು ಸಂಘಟನೆಯ ಕಾರ್ಯಕರ್ತರಾದ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆಗೈದು ಅಟ್ಟಹಾಸ ಮರೆದಿದ್ದಾರೆ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಇಂತಹ ಕ್ರಿಮಿನಲ್ ಸರ್ಕಾರದ ದಿಂದ ನ್ಯಾಯ ದೊರಕುವ, ಕೊಲೆಗಡುಕರಿಗೆ ಶಿಕ್ಷೆಯಾಗುವ ನಂಬಿಕೆ ಹಿಂದು ಸಮಾಜಕ್ಕಿಲ್ಲ, ತಕ್ಷಣ ಹತ್ಯೆ ಪ್ರಕರಣವನ್ನು ಎನ್.ಐ.ಎ. ಗೆ ವರ್ಗಾಯಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ ಆಗ್ರಹ ವ್ಯಕ್ತಪಡಿಸಿದ್ದಾರೆ.
ಕಾನೂನು ಭಂಜಕರಿಗೆ ರಾಜಾರೋಷವಾಗಿ ಮೆರೆಯಲು ಅವಕಾಶ ನೀಡುತ್ತಿರುವ ಈ ಸರ್ಕಾರ ತೊಲಗಬೇಕು. ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಿಸಲು, ಸಂಘಟನೆ, ಪಕ್ಷದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್‌ಗೆ ನೆಲೆ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಹೊರಟಿರುವುದು ಆತಂಕಕಾರಿಯಾಗಿದೆ. ಹಿಂದು ಸಮಾಜ ಒಟ್ಟಾಗಿ ಹೋರಾಡುವುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ಕುಂಪಲರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.