ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಬಿಗ್ಬಾಸ್ ಇದೇ 28 ರಿಂದ ಆರಂಭವಾಗಲಿದೆ. ಬಿಗ್ಬಾಸ್ ಸೀಸನ್- 12 ಶೋನ ಹೊಸ ಲೋಗೋ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಧರ್ಮಸ್ಥಳ ಕೇಸ್‌ನಲ್ಲಿ ಸಂಚಲನ ಮೂಡಿಸಿದ್ದ ಅನನ್ಯ ಭಟ್ ಕಥೆ ಕಟ್ಟಿ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ರಾಜ್ಯಾದ್ಯಂತ ಸುದ್ದಿ ಹಬ್ಬಿಸಿದ್ದ ಸುಜಾತ ಭಟ್ ಗೆ ಕನ್ನಡದ ಬಿಗ್ಬಾಸ್ ಆಫರ್ ಬಂದಿದೆ ಎನ್ನಲಾಗುತ್ತಿದೆ.
ನನ್ನ ಮಗಳು ಕಾಣೆಯಾಗಿದ್ದಾಳೆ ಎನ್ನುತ್ತಿರುವ ಸುಜಾತ ಭಟ್ಗೆ ಕನ್ನಡದ ಬಿಗ್ ಬಾಸ್ ಸೀಸನ್ 12ರಲ್ಲಿ ಭಾಗವಹಿಸುವಂತೆ ಆಫರ್ ಬಂದಿರುವ ಮಾಹಿತಿ ಲಭ್ಯವಾಗಿದೆ.
ಕಾಲೇಜು ಒಂದರಲ್ಲಿ ಎಂಬಿಬಿಎಸ್ ಕೋರ್ಸ್ ಗೆ ಅಡ್ಮಿಷನ್ ಆಗಿದ್ದ ಅನನ್ಯ ಭಟ್ ಆ ಮೇಲೆ ಎಲ್ಲಿ ಹೋದಳು ಎನ್ನುವುದು ಗೊತ್ತಿಲ್ಲ. ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಸುಜಾತ ಭಟ್ ಎಲ್ಲರ ಮುಂದೆ ಅವಲತ್ತುಕೊಳ್ಳುತ್ತಿದ್ದಳು. ದೇವರ ಮೇಲೆಯೂ ಪ್ರಮಾಣ ಮಾಡಿದ್ದರು. ಆದರೆ ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ದಿನಕ್ಕೊಂದು ಟ್ವಿಸ್ಟ್ ಕೊಡಲು ಸುಜಾತ ಭಟ್ ಶುರು ಮಾಡಿದ್ದರು. ಆದರೆ ಸುಜಾತ ಭಟ್ ತೋರಿಸಿರುವ ಫೋಟೋ ವಾಸಂತಿ ಎನ್ನುವರದ್ದು ಎಂದು ವಾಸಂತಿ ಸಹೋದರ ಹೇಳಿದ್ದನು.
2006ರಲ್ಲಿ ಪ್ರಭಾಕರ್ ಬಾಳಿಗ ತೊರೆದ ಸುಜಾತ ಭಟ್ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಅಲ್ಲಿ ರಂಗಪ್ರಸಾದ್ ಎನ್ನುವವರ ಪರಿಚಯವಾಗಿ ಸ್ನೇಹ ಬೆಳೆದಿತ್ತು. ರಂಗಪ್ರಸಾದ್ ಅವರಿಗೆ ಶ್ರೀವತ್ಸ ಹೆಸರಿನ ಮಗ ಇದ್ದರು. ಅವರ ಮೃತ ಪತ್ನಿ ವಾಸಂತಿ. ಆ ವಾಸಂತಿಯ ಫೋಟೋ ಅನ್ನು ತನ್ನ ಮಗಳು ಅನನ್ಯಾ ಭಟ್ ಎಂದು ಸುಜಾತಾ ಭಟ್ ಹೇಳಿದ್ದರು.
ಇದೀಗ ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರಿಗೆ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಜನರಿಂದ ಭಾರಿ ಮನವಿ ಬರುತ್ತಿದೆ. ಅದೇನೆಂದರೆ, ಸುಜಾತಾ ಭಟ್ ಅವರನ್ನು ಮುಂದಿನ ಬಿಗ್ಬಾಸ್ಗೆ ಕರೆಸಿಕೊಳ್ಳಬೇಕು ಎನ್ನುವುದು. ಬಿಗ್ಬಾಸ್ ಮನೆಗೆ ಯೋಗ್ಯರು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು.