ಚಿತ್ರದುರ್ಗ: ಶರಣ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಂತಹದ್ದು. ಶರಣ ಸಾಹಿತ್ಯ ಸ್ವತಂತ್ರ ಸಾಹಿತ್ಯ ಎಂದು 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು ನುಡಿದರು.
ಚಿತ್ರದುರ್ಗ ನಗರದ ಬೃಹನ್ಮಠದ ಆವರಣದ ಅನುಭವ ಮಂಟಪದಲ್ಲಿ ಇಂದಿನಿಂದ ಆರಂಭವಾದ ಎರಡು ದಿನದ 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶರಣರು, ಬಸವಾದಿ ಶರಣರ ವಚನ ಸಾಹಿತ್ಯ ಸ್ವತಂತ್ರವಾದದ್ದಾಗಿದೆ. ಮನುಷ್ಯನ ಒಳಗಿನ ಆತ್ಮವನ್ನು ಎಚ್ಚರಿಸುವಂತಹ ಶಕ್ತಿ ಶರಣ ಸಾಹಿತ್ಯವಾಗಿದೆ. ಅಂಗವು ಹೋಗಿ ಲಿಂಗವಾಗಿಸುವ ಸಂಸ್ಕಾರ ಶರಣ ಸಾಹಿತ್ಯದಿಂದ ಸಾಧ್ಯ. ವೇದ, ಉಪನಿಷತ್ತು, ಷಟ್ ಸ್ಥಳಗಳಲ್ಲಿ ಇರದಂತಹ ವೈಶಿಷ್ಠತೆ ಶರಣ ಸಾಹಿತ್ಯದಲ್ಲಿದೆ. ಇಂತಹ ಸಾಹಿತ್ಯವು ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ಶರಣ ಸಾÀಹಿತ್ಯ ಸಮ್ಮೇಳನಗಳ ಮುಖಾಂತರ ಹೆಚ್ಚು ಪ್ರಚಾರವಾಗಲಿ ಎಂದರು.
ಸಮ್ಮೇಳನದ ಉದ್ಘಾಟನೆ ಸಮಾರಂಭದÀ ದಿವ್ಯ ಸಾನ್ನಿಧ್ಯವಹಿಸಿದ್ದ ಡಂಬಳ–ಗದಗ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ. ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಶರಣ ಸಾಹಿತ್ಯವೂ ಪ್ರತಿ ಜನಸಾಗರದ ಮನದಾಳ ಮುಟ್ಟಬೇಕು. ಇದು ನಮ್ಮ ನಾಡಿನ ಬಸವಾನುಯಾಯಿಗಳ ಸಾಂಸ್ಕøತಿಕ ಸಂಸ್ಥೆಯಾಗಿದೆ. ಅನೇಕ ಭಾಷ ಸಾಹಿತ್ಯಗಳಲ್ಲಿ ಕನ್ನಡ ವಿಶ್ವ ಸಾಹಿತ್ಯದಲ್ಲೇ ಉನ್ನತ ಸ್ಥಾನ ಹೊಂದಿದೆ.
ಅಂತಹ ಸಾಹಿತ್ಯ ನೀಡಿದ ಮಹಾನ್ ವ್ಯಕ್ತಿಗಳೆಂದರೆ ಬಸವಾದಿ ಶರಣರು. ಅವರ ಅಶಯವೆಂದರೆ ಬಸವಾದಿ ಸಾಹಿತ್ಯಿಕ ಮೌಲ್ಯಗಳು ಬೆಳೆದು ಮೌಢ್ಯಾಚರಣೆಗಳು ದೂರವಾಗಬೇಕೆಂದು ಶರಣ ಸಾಹಿತ್ಯ ಸ್ಥಾಪಿಸಿದರು. ಅದಕ್ಕಾಗಿ ಸಾವಿರಾರು ವಚನಗಳನ್ನು ರಚಿಸಿದರು. ಸರ್ವ ಸಮಾನತೆಯ ಮೂಲ ಕಾರಣೀಭೂತರಾದವರು. ಜೊತೆಗೆ ಶೋಷಣೆಯು ನಿರ್ಮೂಲವಾಗಬೇಕೆಂದು ಶರಣರು ಸಾಹಿತ್ಯಗಳನ್ನು ರಚಿಸಿದ್ದಾರೆ. ಕಾಯಕ-ದಾಸೋಹ ತತ್ವಗಳನ್ನು ನಾವು ಅಳವಡಿಸಿಕೊಂಡರೆ ಸಮೃದ್ಧವಾದ ಜೀವನವನ್ನು ನಡೆಸಬಹುದು, ವ್ಯಕ್ತಿಯು ತನ್ನ ಆತ್ಮ ಸಂತೃಪ್ತಿಯನ್ನು ಪಡೆಯಲು ಸಹಾಯಕವಾಗಿರುವುದು ಶರಣರ ಸಾಹಿತ.್ಯ ಈ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಬೇರೆ ರಾಜ್ಯಗಳಲ್ಲೂ ಶರಣವನ್ನು ಸಾಹಿತ್ಯವನ್ನು ಪಸರಿಸುವಲ್ಲಿ ಕಾರ್ಯೋ ನ್ಮಖವಾಗಿದೆ ಎಂದು ನುಡಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ಮಾತನಾಡಿ, 12ನೇ ಶತಮಾನ ಎಂಬುದು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಬಸವಣ್ಣನವರ ಆಚಾರ ವಿಚಾರಗಳನ್ನು ನಾವು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಜೀವನ ಮಾಡುವುದು ನಮ್ಮ ನಿಮ್ಮ ಕರ್ತವ್ಯವಾಗಿದೆ. ಬಸವಣ್ಣನವರು ವಿಚಾರಗಳು ಎಲ್ಲ ಕಡೆಗಳಲ್ಲಿ ವಿಸ್ತಾರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ಬಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡುತ್ತ ಬಸವಣ್ಣ ಸಾಂಸ್ಕøತಿಕ ನಾಯಕರು, ಚೈತನ್ಯಕ್ಕೆ ಮಹತ್ವ ಕೊಟ್ಟವರು, ವಚನಗಳು ನಮ್ಮ ಜೀವನದ ಮೌಲ್ಯಗಳಿದ್ದಂತೆ ಅವುಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ.ಎಸ್.ಆರ್.ಗುಂಜಾಳ್ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಮಾದಾರಚನ್ನಯ್ಯ ಗುರುಪೀಠದಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳು, ಶ್ರೀ ಕಬೀರಾನಂದಾಶ್ರಮದ ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳು, ಡಾ. ಬಸವಪ್ರಭುಸ್ವಾಮಿಗಳು, ಯೋಗಗುರು ಚನ್ನಬಸವಣ್ಣ, ಸಿದ್ದಯ್ಯನಕೋಟೆಯ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು ವಹಿಸಿದ್ದರು. ಸಮಾರಂಭದಲ್ಲಿ ನಾಡೋಜ ಗೊ.ರ.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ ಕಳಸದ, ಆಡಳಿತಮಂಡಳಿ ಸದಸ್ಯರಾದ ಎಸ್.ಎನ್.ಚಂದ್ರಶೇಖರ್, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನುಭವ ಸಂಗಮ-ಸ್ಮರಣ ಸಂಚಿಕೆ, ಶರಣ ದರ್ಶನ ಹಾಗೂ ಶರಣ ಮೇದಾರ ಕೇತಯ್ಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನಾಟ್ಯರಂಜನಿ ನೃತ್ಯಕಲಾಕೇಂದ್ರ, ಡಾ.ನಂದಿನಿ ಶಿವಪ್ರಕಾಶ್, ಚಿತ್ರ ತಂಡ ಕಲಾಕೇಂದ್ರದವರು ವಚನ ರೂಪಕ, ಶ್ರೀ ತೋಟಪ್ಪ ಉತ್ತಂಗಿ, ಶ್ರೀಮತಿ ಕೋಕಿಲ ರುದ್ರಮೂರ್ತಿ ವಚನ ಸಂಗೀತ, ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರಿಂದ ಸಾಮೂಹಿಕ ವಚನ ಗಾಯನ ಹಾಗೂ ಗಾಯತ್ರಿ ಮತ್ತು ತಂಡದವರಿಂದ ವೀಣಾವಾದನ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಡಾ.ರೂಪ ಹುರಳಿ ಬಸವರಾಜು ನಿರೂಪಿಸಿ, ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು.