ನವದೆಹಲಿ: ಮೆಕ್ಸಿಕೋದಲ್ಲಿ ಎಲ್ ಬಾಜಿಯೊದಿಂದ ಟಿಜುವಾನಾಗೆ ವೊಲಾರಿಸ್ 3401 ವಿಮಾನವು ಹಾರಾಟ ಮಾಡಿದ ಕೆಲ ಹೊತ್ತಿನ ನಂತರ ವಿಮಾನ ಹೈಜಾಕ್ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೈಜಾಕ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನದಲ್ಲಿದ್ದ ಶಂಕಿತ ವ್ಯಕ್ತಿಯ ವರ್ತನೆ ಹಾಗೂ ಸಿಬ್ಬಂದಿ ಎದುರಿಸಿದ ಆಘಾತಕಾರಿ ಕ್ಷಣವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ. ಎಲ್ ಬಾಜಿಯೊದಿಂದ ಟಿಜುವಾನಾಗೆ ಮೆಕ್ಸಿಕನ್ ದೇಶೀಯ ವಿಮಾನವನ್ನು ಅಪಹರಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಗೆ ತಿರುಗಿಸಲು ವ್ಯಕ್ತಿಯೊಬ್ಬ ಯತ್ನಿಸಿದ.
ಪ್ರಯಾಣಿಕರು ವೊಲಾರಿಸ್ 3401 ನ್ನು ಮಧ್ಯ ಮೆಕ್ಸಿಕೊದ ಗ್ವಾಡಲಜಾರಾಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಶಂಕಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಬಳಿಕ ವೊಲಾರಿಸ್ 3401 ವಿಮಾನವು ಯುಎಸ್ ಗಡಿಯಲ್ಲಿರುವ ಟಿಜುವಾನಾಗೆ ಪ್ರಯಾಣಿಸಿತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಈ ಸಂಬಂಧ ವೊಲಾರಿಸ್‌ನ CEO, ಎನ್ರಿಕ್ ಬೆಲ್ಟ್ರಾನೆನಾ ಹೇಳಿಕೆ ನೀಡಿದ್ದು, ಎಲ್ ಬಾಜಿಯೊ – ಟಿಜುವಾನಾ ಮಾರ್ಗದಲ್ಲಿ ಸಂಚರಿಸುವ ವೊಲಾರಿಸ್ ಫ್ಲೈಟ್ 3041 ನಲ್ಲಿ ಆತಂಕದ ಕ್ಷಣ ಎದುರಿಸಿದ್ದೇವೆ. ಪ್ರಯಾಣಿಕರೊಬ್ಬರು ವಿಮಾನವನ್ನು ಯುನೈಟೆಡ್ ಸ್ಟೇಟ್ಸ್‌ಗೆ ತಿರುಗಿಸಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ.