ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಮಾಡಬೇಕಿದೆ ಈ ಹಿನ್ನಲೆಯಲ್ಲಿ ಯುವಜನಾಂಗಕ್ಕೆ ಕಾಂಗ್ರೆಸ್ನ ತತ್ವ ಸಿದ್ದಾಂತವನ್ನು ತಿಳಿಸುವುದರ ಮೂಲಕ ಪಕ್ಷದ ಸದಸ್ಯರನ್ನಾಗಿ ಮಾಡುವಂತೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆದರ್ಶ ಸೈಟ್ ಶ್ಯಾಮಣ್ಣ ರವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್ಪೀರ್ ರವರು ಸೂಚನೆ ನೀಡಿದರು.
ಚಿತ್ರದುರ್ಗ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಆದರ್ಶ ಸೈಟ್ ಶ್ಯಾಮಣ್ಣ ರವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು ಆದರೆ ಇತ್ತಿಚಿನ ದಿನದಲ್ಲಿ ಇದು ಕಡಿಮೆಯಾಗಿದೆ, ಇದನ್ನು ಮರಳಿ ಕಾಂಗ್ರೆಸ್ ಭದ್ರ ಕೋಟೆಯಾಗಿ ಮಾಡಬೇಕಿದೆ, ಇದಕ್ಕೆ ಯುವ ಜನಾಂಗದ ಸಹಕಾರ ಅಗತ್ಯವಾಗಿದೆ, ಯುವ ಜನಾಂಗವನ್ನು ಭೇಟಿ ಮಾಡಿ ಅವರಿಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ತಿಳಿಸುವುದರ ಮೂಲಕ ಅವರನ್ನು ನಮ್ಮ ಪಕ್ಷದ ಸದಸ್ಯರನ್ನಾಗಿ ಮಾಡಬೇಕಿದೆ. ಇದಕ್ಕೆ ಚಿತ್ರದುರ್ಗ ವಿಧಾನಸಬಾ ಕ್ಷೇತ್ರದ ಸಮಿತಿ ಪರಿಶ್ರಮವನ್ನು ಹಾಕಬೇಕಿದೆ ಎಂದು ಸೂಚಿಸಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ಇದೆ ಈ ಎರಡು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಉತ್ತಮವಾದ ಕಾರ್ಯವನ್ನು ಮಾಡಿದೆ ಬ್ರಿಟಿಷರನ್ನು ದೇಶದಿಂದ ಹೊರದೂಡುವಲ್ಲಿ ಹಾಗೂ ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್ ಮಹತ್ತರವಾದ ಪಾತ್ರವನ್ನು ವಹಿಸಿದೆ, ಇದನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಿದೆ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು ಇದರಿಂದ ಜನರ ಸಮಸ್ಯೆಗಳನ್ನು ಅಲಿಸಿ ಅದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ತಾಜ್ಪೀರ್ ತಿಳಿ ಹೇಳಿ ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ನಿಮ್ಮಗಳ ಪಾತ್ರ ಅಧಿಕವಾಗಿದೆ ಪಕ್ಷ ಯಾರಿಗೂ ಟಿಕೇಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸುವ ಹೊಣೆಯನ್ನು ಹೊರಬೇಕಿದೆ ಎಂದರು.
ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಆದರ್ಶ ಸೈಟ್ ಶ್ಯಾಮಣ್ಣ ಮಾತನಾಡಿ ಈ ಚುನಾವಣೆಯಲ್ಲಿ ನನ್ನ ಮೇಲೆ ನಂಬಿಕೆಯನ್ನು ಇಟ್ಟು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಸಹಾ ಧನ್ಯವಾದಗಳು, ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಮುಂದಿನ ದಿನದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುವುದು, ನಮ್ಮ ಯುವ ಪಡೆಯನ್ನು ರಚನೆ ಮಾಡುವುದರ ಮೂಲಕ ಕಾಂಗ್ರೆಸ್ನ್ನು ಬಲಿಷ್ಠವಾಗಿ ಮಾಡಲಾಗುವುದು. ಚಿತ್ರದುರ್ಗ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಉಲ್ಲಾಸ್ ಕಾರೇಹಳ್ಳಿ ಯವರಿದ್ದಾರೆ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಇದ್ದಲ್ಲದೆ ಪಕ್ಷದ ಹಿರಿಯರ ಮಾರ್ಗದರ್ಶನ, ಸೂಚನೆಯನ್ನು ಪರಿಗಣಿಸಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತಿನಂತೆ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ, ಇದು ಜನರಿಗೆ ಸರಿಯಾಗಿ ತಲುಪಿದ್ದೇಯೇ ಇಲ್ಲವೆ ಇದರಿಂದ ಇನ್ನೂ ಯರು ಹೊರಗಡೆ ಇದ್ದಾರೆ ಎಂಬುದನ್ನು ಪತ್ತೇ ಮಾಡುವುದರ ಮೂಲಕ ಅವರನ್ನು ಸಹಾ ಈ ಗ್ಯಾರೆಂಟಿ ಯೋಜನೆಯಡಿ ತರುವ ಕಾರ್ಯವನ್ನು ಮಾಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ಗ್ರಾಮಾಂತರ ಅಧ್ಯಕ್ಷ ಸುನೀಲ್, ವಿಷ್ಣು ಬುರುಜನಹಟ್ಟಿ, ವೇದ, ಸೈಟ್ ಶ್ಯಾಮಣ್ಣ ಸೇರಿದಂತೆ ಇತರ ಹಾಜರಿದ್ದು ಆದರ್ಶ ಸೈಟ್ ಶ್ಯಾಮಣ್ಣರವರಿಗೆ ಶುಭ ಕೋರಿದರು.