ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿನ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ. ಓದುತ್ತಿರುವ ಎನ್.ಸಿ.ಸಿ ವಿದ್ಯಾರ್ಥಿ ತೇಜ.ಕೆ. 2026 ಜನವರಿ 26 ಗಣರಾಜ್ಯೋತ್ಸವ ಪಂಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಬಿ.ಜೆ.ಕೆರೆ ಗ್ರಾಮದ ಕರಿಬಸಪ್ಪ.ಎನ್.ಎಸ್.ಹಾಗೂ ಈರಮ್ಮ ದಂಪತಿಗಳ ಸುಪುತ್ರರಾಗಿದ್ದು, ಕರ್ನಾಟಕ ಮತ್ತು ಗೋವಾ ಡೈರೆಕ್ಟರೆಟ್ ದಾವಣಗೆರೆ ಬಟಾಲಿಯನ್ ವ್ಯಾಪ್ತಿಯಲ್ಲಿ ಬರುವ ಈ ಕಾಲೇಜಿನಿಂದ ದೆಹಲಿಯಲ್ಲಿ ನಡೆಯುವ 2026 ರ ಗಣರಾಜ್ಯೋತ್ಸವ ಪೆರೆಡ್ಗೆ ಈ ಬಾರಿ ಆಯ್ಕೆಯಾಗಿರುತ್ತಾರೆ.
ಇದಕ್ಕೂ ಮೊದಲು 8 ಕ್ಯಾಂಪ್ಗಳಲ್ಲಿ ಆಯ್ಕೆಯಾಗಿ ಕೊನೆಯದಾಗಿ ದೆಹಲಿಗೆ ಆಯ್ಕೆಯಾಗಿರುತ್ತಾರೆ,ಇದು ಕಾಲೇಜಿಗೆ ಹಾಗೂ ಚಳ್ಳಕೆರೆ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದು ವಿಧ್ಯಾರ್ಥಿಯ ಮಾರ್ಗದರ್ಶಕರು ಮತ್ತು ಓಅಅ ಅಧಿಕಾರಿಗಳು ಕ್ಯಾಪ್ಟನ್ ಡಾ.ಸ.ರಾ.ಲೇಪಾಕ್ಷ ಹಾಗೂ ಡಾ.ಎಮ್.ಕೆ.ದೇವಪ್ಪ ತಿಳಿಸಿರುತ್ತಾರೆ.
































