ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಪರ್ಶ ಹಾಸ್ಪಿಟಲ್ನಲ್ಲಿ ದಾಖಲಾಗಿರುವ ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿ ಆರೋಗ್ಯದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ.
ನಮಸ್ಕಾರ ಎಲ್ಲರಿಗೂ. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ. ಏನಾಗಿದೆ ಏನಾಯ್ತು ಅಂತ. ನಂಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್ಟ್ರೀಮ್ ಲೆವೆಲ್ಗೆ ಹೋಗಿದೆ ಇನ್ಫೆಕ್ಷನ್.
ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಳೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮ್ಗೆ ವಿಧಿಯಿಲ್ಲ. ಶೂಟಿಂಗ್ ಸೆಟ್ನಲ್ಲಿ ರೆಸ್ಟ್ ರೂಮ್ ಯೂಸ್ ಮಾಡ್ಬೇಕಾಗುತ್ತದೆ. ನಮ್ಮ ಶೂಟಿಂಗ್ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ. ನಾನು ಈಗ ಹುಷಾರಾಗುತ್ತಿದ್ದೇನೆ ಎಂದಿದ್ದಾರೆ. ಇವರು ಕುಲವಧು, ಮಿಸ್ಟರ್ & ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದವರು ಅಮೃತಾ. ಸದ್ಯ ಕೆಂಡ ಸಂಪಿಗೆ ಧಾರಾವಾಹಿಯ ಸಾಧನಾ ಮೂಲಕ ಮತ್ತಷ್ಟು ಫೇಮಸ್ ಆಗಿದ್ದರು ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ತನ್ನದೇ ಆದ ಛಾಪನ್ನು ಮುಡಿಸಿಕೊಂಡಿದ್ದಾರೆ.