ಹೈದರಬಾದ್: ಖ್ಯಾತ ನಟ ಕೋಟಾ ಶ್ರೀನಿವಾಸ ರಾವ್ (83) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 4 ಗಂಟೆಗೆ ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ತೆಲುಗು, ತಮಿಳು, ಕನ್ನಡ (ನಮ್ಮ ಬಸವ, ರಕ್ತಕಣ್ಣೀರು, ಕಬ್ಬಾ, ಲೇಡಿ ಕಮಿಷನರ್) ಸೇರಿದಂತೆ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಶ್ರೀನಿವಾಸ ರಾವ್ ನಟಿಸಿದ್ದಾರೆ. ದೇಶದ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದ ಕೋಟಾ, 1999 ರಿಂದ 2004 ರವರೆಗೆ ವಿಜಯವಾಡ ಕ್ಷೇತ್ರದ ಶಾಸಕರಾಗಿದ್ದರು.