ಕ್ಯಾನ್‌ಬೆರಾ: ಹಿಂದೂ ವಿರೋಧಿ ಮನಸ್ಥಿತಿಗಳ ಅಟ್ಟಹಾಸ ಆಸ್ಟ್ರೇಲಿಯಾದಲ್ಲೂ ನಡೆದಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಬೊರೋನಿಯಾದಲ್ಲಿರುವ ಸ್ವಾಮಿ ನಾರಾಯಣ ಹಿಂದೂ ದೇವಾಲಯದ ಗೋಡೆಯನ್ನು ವಿರೂಪಗೊಳಿಸಲಾಗಿದೆ. ಜೊತೆಗೆ 2 ರೆಸ್ಟೋರೆಂಟ್ ಮೇಲೆ ಕೆಂಪು ಬಣ್ಣ ಬಳಸಿ ಜನಾಂಗೀಯ ಬರಹಗಳನ್ನು ಬರೆದು ವಿಕೃತಿ ಮೆರೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿಕ್ಟೋರಿಯಾದ ಪ್ರಧಾನಿ ಜಸಿಂತಾ ಆಲನ್ ಪ್ರತಿಕ್ರಿಯೆ ನೀಡಿದ್ದು, ಇದು ಹಿಂದೂ ಸಮುದಾಯವನ್ನು ಹೆದರಿಸುವುದಕ್ಕಾಗಿಯೇ ಮಾಡಿರುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.