ಚಿತ್ರದುರ್ಗ : ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮತ ಸಮಿತಿ (ರಿ.), ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ (ನಿ) ಬೆಂಗಳೂರು, ಜಿಲ್ಲಾಡಳಿತ, ದಾವಣಗೆರೆ ಇವರುಗಳ ಸಹಯೋಗದೊಂದಿಗೆ ಸಂತರ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ. 13 ರಿಂದ 15ರವರೆಗೆ ಸಂತ ಸೇವಾಲಾಲರ 286ನೇ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ ಎಂದು ಸಮಾಜದ ಮುಖಂಡರಾದ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರಲ್ಲಿ ಮಂಗಳವಾರ ಜಾತ್ರೆಗೆ ಸಂಭಂಧಿಸಿದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಈ ಜಾತ್ರಾ ಮಹೋತ್ಸವದಲ್ಲಿ ನಮ್ಮ ಜನಾಂಗದ ಸ್ಥಿತಿ-ಗತಿಗಳ ನಮ್ಮ ಭಾಷೆ, ಸಂಸ್ಕøತಿಯ ಬಗ್ಗೆ ಚರ್ಚೆ ನಡೆಯಲಿದೆ, ಇದರ ಬಗ್ಗೆ ಸಮಾಜದ ಮುಖಂಡರು ರಾಜಕೀಯ ವ್ಯಕ್ತಿಗಳು ಮಾತನಾಡಲಿದ್ದಾರೆ. ಅಲೆಮಾರಿಗಳಾಗಿದ್ದ ನಮ್ಮ ಸಮುದಾಯವನ್ನು ಒಂದು ಕಡೆಯಲ್ಲಿ ನೆಲೆ ನಿಂತುಕೊಳ್ಳಲು ಸಂತ ಸೇವಾಲಾಲ್ ರವರು ಕಾರಣರಾಗಿದ್ದಾರೆ.21 ದಿವಸ ನಮ್ಮ ಸಮುದಾಯದವರು ಕಠಿಣವಾದ ವ್ರತವನ್ನು ಆಚರಣೆ ಮಾಡುವುದರ ಮೂಲಕ ಮಾಲಾಧಾರಿಗಳಾಗಿ ಇಲ್ಲಿಗೆ ಆಗಮಿಸಲಿದ್ದಾರೆ, ಈ ಮಹೋತ್ಸವದಲ್ಲಿ ರಾಜ್ಯ ಅಲ್ಲದೆ ನೆರೆ ರಾಜ್ಯಗಳಿಂದಲೂ ಸಹಾ ಭಕ್ತಾಧಿಗಳು ಆಗಮಿಸಲಿದ್ದಾರೆ ಎಂದರು.
ಈ ಜಯಂತ್ಯೋತ್ಸವದ ಕಾರ್ಯಕ್ರಮಗಳು 2025ರ ಫೆಬ್ರವರಿ 13 ರಿಂದ ಪ್ರಾರಂಭಗೊಂಡು ಫೆಬ್ರವರಿ 15 ರವೆರೆಗೆ ನಡೆಯಲಿದೆ. ಸಂತ ಸೇವಾಲಾಲರವರ 286ನೇ ಜಯಂತ್ಯೋತ್ಸವದ ಅಂಗವಾಗಿ ಫೆ. 13 ರಂದು ಕಾಟಿ, ಆರೋಹನ, ತಾಂಡಾ, ಸಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಸ್ಪರ್ದೆಗಳು, ಸತ್ಸಂಗ, ವಾಜಾ ಭಜನೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು. ಫೆ. 14ರ ಮುಂಜಾನೆ ಪೂರ್ಣಕುಂಭ ಮೆರವಣಿಗೆ ಮಾತಾ ಮರಿಯಮ್ಮ ದೇವಿಗೆ ಅಭಿಷೇಕ ಮತ್ತು ಅಲಂಕಾರ, ಸಂತ ಸೇವಾಲಾಲ್ ಮೂರ್ತಿಯ ಅಭಿಷೇಕ ಮತ್ತು ಅಲಂಕಾರ, ಉಭಯ ಮಾಲಾಧಾರಿಗಳಿಗೆ ವರ್ತನ ಮತ್ತು ಸೇವಾ ಸಂದೇಶ, ಮಹಾಮಂಗಳಾರತಿ, ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಿರಂತರವಾಗಿ ಮಾಲಾಧಾರಿಗಳಿಂದ ಮಾಲೆ ಇರುಮುಡಿ ಸಮರ್ಪಣ ಕಾರ್ಯಕ್ರಮ ಸಮಿತಿಯಿಂದ ಆಯೋಜಿಸಲ್ಪಡುವ ಜಯಂತ್ಯೋತ್ಸವದ ಜಾಗರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಫೆ. 15 ರಂದು ಮಹಾಭೋಗ್, ನಿರಂತರ ಪೂಜೆ ಮತ್ತು ದರ್ಶನ, ತೀಚ್ ವಿಸರ್ಜನೆ, ಮುಕ್ತಾಯ ಸಮಾರಂಭ ನಡೆಯಲಿದೆ.
ಸಂತ ಸೇವಾಲಾಲರ 286ನೇ ಜಯಂತಿ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಫೆ. 14 ರ ಮಧ್ಯಾಹ್ನ 2.30 ಗಂಟೆಗೆ ನೆರವೇರಿಸಲಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ, ಮಹಾರಾಷ್ಟ್ರ ರಾಜ್ಯದ ಸಚಿವರಾದ ಸಂಜಯ್ ಡಿ. ರಾಥೋಡ್. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗಣಿ-ಭೂ ವಿಜ್ಞಾನ ಮತ್ತು ತೋಟಗಾರಿಕಾ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧುಬಂಗಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ, ಮಾನ್ಯ ವಿರೋಧಪಕ್ಷದ ನಾಯಕರಾದ ಆರ್. ಅಶೋಕ್, ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಬಿ.ವೈ. ರಾಘವೇಂದ್ರ, ಮಾಜಿ ಸಂಸದರಾದ ಡಾ. ಉಮೇಶ್ ಜಿ. ಜಾಧವ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಡಿ.ಜಿ. ಶಾಂತನಗೌಡರು ವಹಿಸಲಿದ್ದಾರೆ
ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಫೆ.13ರಂದು ಸಂಜೆ 4.30ಕ್ಕೆ ಸೂರಗೊಂಡನಕೊಪ್ಪ ಜ ಭಾಯಾಗಡ್ದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಹಿರಿಯ ಅಧಿಕಾರಿ ಬಿ.ಹೀರಾನಾಯ್ಕ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಉಪಸಭಾಪತಿ ಹಾಗೂ ಸಂತಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರುದ್ರಪ್ಪ ಮಾನಪ್ಪ ಲಮಾಣಿ ಭಾಗವಹಿಸುವರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ನಿರ್ದೇಶಕ ರಾಘವೇಂದ್ರ ನಾಯ್ಕ, ಭಾಯಾಗಡ್ ನಿರ್ದೇಶಕ ಡಾ. ಎಲ್. ಈಶ್ವರ ನಾಯ್ಕ, ಡಿ.ಥಾರ್ ಯಾನಾಯ್ಕ, ಗೋಪಾಲ್ ನಾಯ್ಕ, ಬೋಜಾನಾಯ್ಕ, ಉಪಾಧ್ಯಕ್ಷರಾದ ಕುಮಾರ ನಾಯ್ಕ ಬಾಂಬೆ, ಮಲ್ಲಿಕಾರ್ಜುನ್ ಬಿ.ನಾಯ್ಕ, ಧರ್ಮದರ್ಶಿ ಬೋಜ್ಯಾ ನಾಯ್ಕ, ಕರ್ನಾಟಕ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಆರ್. ರಾಜಾನಾಯ್ಕ ಸಿಂಗಟಗೆರೆ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ್ ಭಾಗವಹಿಸುವರು. ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತ ನಾಯಕ ಅಧ್ಯಕ್ಷತೆ ವಹಿಸುವರು.
ಬಂಜಾರ ಸಮುದಾಯದ ಪ್ರಧಾನ ದೈವಗಳು ಹಾಗೂ ಮಹಿಳಾ ದೈವಗಳ ಆರಾಧನೆ ಕುರಿತು ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಪ್ರೊ.ಸಣ್ಣರಾಮ ನಾಯ್ಕ ವಿಷಯ ಮಂಡನೆ ಮಾಡುವರು. ಬೆಂಗಳೂರು ವಿವಿ ಉಪನ್ಯಾಸಕ ಡಾ. ಡಿ.ಪರಮೇಶ್ವರನಾಯ್ಕ ಸಂವಾದ ಮಾಡುವರು. ಬಹುತ್ವ ಸಂಸ್ಕೃತಿಗಳ ಭಾರತದಲ್ಲಿ ಅಲೆಮಾರಿ ಬುಡಕಟ್ಟುಗಳ ಧಾರ್ಮಿಕ ಶ್ರದ್ಧೆ ಮತ್ತು ಲೋಕದೃಷ್ಟಿಯ ಕುರಿತು ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜ ನಾಯ್ಕ ವಿಷಯ ಮಂಡನೆ ಮಾಡುವರು.
ಪ್ರಗತಿಪರ ಚಿಂತರಕರು ಹಾಗೂ ಕೃಷಿಕ ಡಾ. ಎಸ್.ಇಂದ್ರಾನಾಯ್ಕ ಮತ್ತು ನಿವೃತ್ತ ಡಿವೈಎಸ್ಪಿಗೋಪಾಲನಾಯ್ಕಸಂವಾದ ನಡೆಸುವರು. ಧರ್ಮ ವೈಚಾರಿಕತೆ ಮತ್ತು ವೈಜ್ಞಾನಿಕತೆ ಕುರಿತು ಸವಣೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಗಂಗಾನಾಯ್ಕ ಎಲ್. ವಿಷಯ ಮಂಡನೆ ಮಾಡುವರು. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರಾದ ಡಾ.ರಾಜು ಮತ್ತು ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಶಿವಣ್ಣ ನಾಯ್ಕ ಸಂವಾದ ನಡೆಸುವರು.
ಗೋಷ್ಟಿಯಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ್, ಮುಖಂಡರಾದ ಹನುಮಂತನಾಯ್ಕ್, ಲಿಂಗನಾಯ್ಕ್, ರಮೇಶ್ ನಾಯ್ಕ್, ತಿಪ್ಪೇಸ್ವಾಮಿ ಆನಂತ ಮೂರ್ತಿ, ಕುಮಾರ್ ನಾಯ್ಕ್, ಬಸವರಾಜಪ್ಪ, ಲಕ್ಷ್ಮಣ್, ರವಿನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು