ರಾಯಚೂರು : ಕಾಲೇಜಿಗೆ ಹೋಗುತ್ತಿರುವ ಯುವತಿಯರಿಗೆ ವಿಕೃತ ಕಾಮಿಯೊಬ್ಬ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಆರೋಪಿಯನ್ನ ಅಕ್ಬರ್ ಎಂದು ಗುರುತಿಸಲಾಗಿದ್ದು, ಅಕ್ಬರ್ ರಾಯಚೂರು ನಗರದ ನಿಲ್ದಾಣದ ಬಳಿಯ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು ಎನ್ನಲಾಗಿದೆ.
ನಂತರ ಅವರ ಮುಂದೆ ನಿಂತು ಮರ್ಮಾಂಗ ತೋರಿಸುತ್ತಿದ್ದನು. ಈತನ ವಿಕೃತ ಕೃತ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯ ಇದೇ ರೀತಿಯಾಗಿ ಮಾಡುತ್ತಿದ್ದ, ಅಕ್ಬರ್ ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಕೂಡಲೇ ಪೊಲೀಸರು ಕಾಮುಕ ಅಕ್ಬರ್ ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.