ಬೆಂಗಳೂರು: ಕೋರ್ಟ್‌ನಲ್ಲಿ ವಾರೆಂಟ್ ಆಗಿದ್ದರೂ 9 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ. ಮಗನ ಇನ್‌ಸ್ಟಾಗ್ರಾಮ್ ಐಡಿಯಿಂದ 9 ವರ್ಷಗಳ ನಂತರ ಆರೋಪಿ ಮಹಮ್ಮದ್ ಫಾರೂಕ್ ಸಿಕ್ಕಿಬಿದ್ದಿದ್ದಿದ್ದಾನೆ. ಮಗ ಅಪ್ಪನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ. ಇದು ಆರೋಪಿ ಫಾರೂಕ್‌ಗೆ ಮುಳುವಾಗಿದೆ. ಮಹಮ್ಮದ್ ಫಾರೂಕ್ ನ್ಯಾಯಾಲಯಕ್ಕೆ ಹಾಜರಾಗದೆ 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಕೊಲೆಯತ್ನ, ಮಾರಾಕಸ್ತ್ರಗಳಿಂದ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಮ್ಮದ್ ಫಾರೂಕ್ ತನ್ನ ತಂದೆ ಸತ್ತಾಗಲೂ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಪೊಲೀಸರು ಮಹಮ್ಮದ್ ಫಾರೂಕ್‌ಗಾಗಿ ತುಂಬಾ ಹುಡುಕಾಟ ನಡೆಸಿದ್ರು. ಮೊಬೈಲ್ ನಂಬರ್ ಕೂಡ ಅಕ್ಟೀವ್ ಇಲ್ಲ. ಅತ್ತ ತನ್ನ ಸೋಷಿಯಲ್ ಮೀಡಿಯಾವನ್ನು ಕೂಡ ಬಳಸ್ತಿರಲಿಲ್ಲ. ಮಹಮ್ಮದ್ ಫಾರೂಕ್ ಮಗನ ಸೋಷಿಯಲ್ ಮೀಡಿಯಾ ಐಪಿ ಅಡ್ರೆಸ್ ತೆಗೆದು ಟ್ರೆಸ್ ಮಾಡಿದಾಗ ಪೊಲೀಸರ ಬಲೆ ಬಿದ್ದಿದ್ದಾನೆ. ಮಕ್ಕಳನ್ನ ಸ್ಕೂಲ್‌ಗೆ ಬಿಡಲು ಬರುತ್ತಿದ್ದ ಮಹಮ್ಮದ್ ಫಾರೂಕ್ ಬಗ್ಗೆ ಮಾಹಿತಿ ಪಡೆದು ಆತನಿಗಾಗಿ ಕಾದು ಕುಳಿತಿದ್ದ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪ್ರಕರಣವನ್ನ 9 ವರ್ಷದ ನಂತರ ಮಡಿವಾಳ ಪೊಲೀಸ್ರು ಪತ್ತೆ ಮಾಡಿದ್ದಾರೆ.
