ದೆಹಲಿ: 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 45 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಕನ್ನಡಿಗ ಪುಸ್ತಕ ಮನೆ ಖ್ಯಾತಿಯ ಅಂಕೇಗೌಡ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂಕೇಗೌಡ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದವರು. 20 ಲಕ್ಷಕ್ಕೂ ಹೆಚ್ಚು ಪುಸ್ತಗಳನ್ನು ಸಂಗ್ರಹಿಸಿರುವ ಕೀರ್ತಿ ಅಂಕೇಗೌಡ ಅವರದ್ದು. ಪುಸ್ತಕ ಮನೆ ಎಂಬ ಗ್ರಂಥಾಲಯನ್ನು ನಿರ್ಮಿಸಿ ಜನಪ್ರಿಯರಾಗಿದ್ದಾರೆ.
20ನೇ ವಯಸ್ಸಿನಲ್ಲಿಯೇ ಅಂಕೇಗೌಡ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸ ಆರಂಭಿಸಿದ್ದರು. ಅಂಕೇಗೌಡ ಅವರ ವಿಶಿಷ್ಠ ಸಾಧನೆಯನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಈ ಬಾರಿಯ ಪದ್ಮಶ್ರೀ ಗೌರವಕ್ಕೆ ಆಯ್ಕೆ ಮಾಡಿದೆ.
ಇನ್ನು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಪಿ.ಆರ್.ಶ್ರೀಜೇಶ್, ರಘುಪತ್ ಸಿಂಗ್, ತಾಗಾ ರಾಮ್ ಭೀಲ್ ಸೇರಿದಂತೆ ಒಟ್ಟು 45 ಸಾಧಕರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
































