ಹರಿಯಾಣದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ನಂತರ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಹತ್ಯೆಗೈ*ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಘಟನೆ ನಡೆದಿದ್ದು, ಆರೋಪಿ ರವೀನಾ ಎಂಬಾಕೆ ಯೂಟ್ಯೂಬರ್ ಆಗಿದ್ದು, ಆಕೆ ಪ್ರಿಯಕರನೊಂದಿಗೆ ಸೇರಿ ಪತಿ ಪ್ರವೀಣ್ ನನ್ನ ಹ*ತ್ಯೆಗೈದು ಶ*ವವನ್ನು ತಮ್ಮ ಬೈಕ್‌ನಲ್ಲಿ ಸಾಗಿಸಿ ನಗರದ ಹೊರಗಿನ ಚರಂಡಿಗೆ ಎಸೆದಿದ್ದರು.
ಬಂಧನಕ್ಕೊಳಗಾಗಿರುವ ರವೀನಾ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳು ಮತ್ತು ರೀಲ್‌ಗಳ ಕುರಿತು ಆಕ್ಷೇಪ ಎತ್ತಿದಾಗ ಮದ್ಯವ್ಯಸನಿಯಾಗಿದ್ದ ಪ್ರವೀಣ್ ಜತೆ ಆಗಾಗ್ಗೆ ಜಗಳವಾಡುತ್ತಿದ್ದಳು. 2017 ರಲ್ಲಿ ದಂಪತಿಗೆ ವಿವಾಹವಾಗಿದ್ದು ಮುಕುಲ್ ಎಂಬ ಆರು ವರ್ಷದ ಮಗನಿದ್ದಾನೆ.
ಎರಡು ವರ್ಷಗಳ ಹಿಂದೆ, ರವೀನಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಿಸಾರ್‌ನ ಯೂಟ್ಯೂಬರ್ ಸುರೇಶ್ ಅವರೊಂದಿಗೆ ಸ್ನೇಹವಾಗಿದ್ದು ಕಾಲಾನಂತರ ಇಬ್ಬರು ಸಂಬಂಧ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಮಾರ್ಚ್ 25 ರಂದು ಪ್ರವೀಣ್ ಮನೆಗೆ ಬಂದ ವೇಳೆ ರವೀನಾ ಮತ್ತು ಸುರೇಶ್ ರನ್ನು ಆಕ್ಷೇಪಾರ್ಹ ಭಂಗಿಯಲ್ಲಿ ಇರುವುದನ್ನು ನಾನು ನೋಡಿದ ಬಳಿಕ ಜಗಳವಾಗಿದ್ದು ಅಂದು ರಾತ್ರಿ ಕತ್ತು ಹಿಸು*ಕಿ ಹ*ತ್ಯೆ ನಡೆಸಲಾಗಿದೆ ಎಂದು ತನಿಖೆಯಲಿ ತಿಳಿದು ಬಂದಿದೆ.