ಚಿತ್ರದುರ್ಗ: ನಮ್ಮ ಎಲ್ಲಾ ಕೆಲಸದ ಹಿಂದೆ ಗುರು ಇದ್ದೇ ಇರುತ್ತಾನೆ ಆದರೂ ತಂದೆ-ತಾಯಿಗಳೇ ಮೊದಲು ಹೇಳಿಕೊಡುವವರು ಗುರು ಉತ್ತಮ ಸಂಸ್ಕಾರವನ್ನು ನೀಡುವವರು ಗುರುಗಳು ಕಷ್ಟದಲ್ಲಿದ್ದಾಗ ಸಹಾಯ ಮಾಡುವ ಸಹಕರಿಸುವ ನಮ್ಮ ಅಭಿವೃದ್ಧಿಗೆ ಪೂರಕವಾಗಿ ಮಾಹಿತಿ ಕೊಡುವವರು ಗುರುಗಳು ಹಾಗಾಗಿ ಗುರುಗಳನ್ನು ಪ್ರತಿಯೊಬ್ಬರನ್ನು ಗೌರವಿಸುವ ಈ ಪುಣ್ಯ ದಿನವೇ ಗುರುಪೂರ್ಣಿಮಾ ಎಂದು ಸಾಹಿತಿ ಹುರಳಿ ಬಸವರಾಜು ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ಬಡಾವಣೆಯ ಕಬೀರಾನಂದಾಶ್ರಮದಲ್ಲಿ ಗುರುವಾರ ಸಂಜೆ ಭಕ್ತಾಧಿ ಗಳಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು ಹಲವು ವಿಧವಾಗಿ ಹಲವಾರು ರೀತಿಯಲ್ಲಿ ಕಾಣುತ್ತೇವೆ ಹಾಗಾಗಿ ಪೋಷಕರನ್ನು ಪೂಜಿಸುವ ಈ ವಿನೂತನ ದಿನವೇ ಗುರುಪೂರ್ಣಿಮಾ ಇದನ್ನು ಪ್ರತಿ ವಿದ್ಯಾರ್ಥಿಗಳು ತಮ್ಮ ಸಂಸ್ಕಾರದ ಜೊತೆಯಲ್ಲಿ ಅಳವಡಿಸಿ ಕೊಂಡಾಗ ಅದಕ್ಕೆ ಹೆಚ್ಚಿನ ಮಹತ್ವ ಲಭಿಸುತ್ತದೆ. ಸಂಸ್ಕೃತದಲ್ಲಿ ಗುರು ಎಂದರೆ ಅಂದಕಾರ ಅಜ್ಞಾನ ಅದೇ ರೀತಿ ಗುರು ಎಂದರೆ ಹೋಗಲಾಡಿಸುವುದು ಕತ್ತಲಿನಿಂದ ಬೆಳಕಿನೆಡೆಗೆ ಹೋಗುವುದು ಎಂದು ತಿಳಿಸಿದರಲ್ಲದೆ ಗುರು ಪೂರ್ಣಿಮಾ ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಕೇವಲ ಖಾವಿ ಧರಿಸಿದವರು ಗುರುಗಳಷ್ಟೇ ಅಲ್ಲದೇ ಜೀವನಕ್ಕೆ ದಾರಿ ದೀಪವಾದ ಅಕ್ಷರ ಕಲಿಸಿದ ಶಿಕ್ಷಕರು ಅಧ್ಯಾಪಕರು ಗುರುಗಳೇ ಮಕ್ಕಳು ಅಕ್ಷರಭ್ಯಾಸವನ್ನು ಸ್ಟೇಟು ಬಳಪದಿಂದ ಆರಂಭಿಸಿದರು. ಅಕ್ಷರ ಕಲಿಸಿದ. ಅನ್ನ, ಆಶ್ರಯ ನೀಡಿದ ಗುರುಗಳು ಹಾಗೂ ಮಠಮಾನ್ಯಗಳನ್ನು ಮರೆಯಬಾರದು. ಮಕ್ಕಳು ಬೆಳೆಯುತ್ತಾ ದೊಡ್ಡವರಾದಂತೆಲ್ಲ ಶಿಕ್ಷಕರನ್ನು ಸ್ಮರಿಸುವಂತಾಗಬೇಕು ಗುರು ಮತ್ತು ದೇವರು ಎದುರಿಗೆ ಬಂದು ನಿಂತರೆ ಮೊದಲು ಯಾರಿಗೆ ನಮಸ್ಕರಿಸುತ್ತೀರಿ ಎಂದಾಗ, ಗುರುಗಳಿಗೆ ಮೊದಲು ನಮಸ್ಕರಿಸುತ್ತೇನೆ. ಏಕೆಂದರೆ ದೇವರನ್ನು ತೋರಿದ ಗುರುವಿಗೆ ಮೊದಲ ಸ್ಥಾನ ಗುರು ಪೂರ್ಣಿಮೆಯನ್ನು ಇಡೀ ಜಗತ್ತು ಆಚರಿಸುತ್ತಿದೆ. ಭಾರತ ದೇಶವಲ್ಲದೇ ಇಡೀ ಜಗತ್ತಿನಾದ್ಯಂತ ಗುರುವಿಗೆ ಅಪಾರ ಮಹತ್ವವಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬುದಾಗಿದೆ. ಇದರಲ್ಲಿ ತಾಯಿ ಮೊದಲ ಗುರು. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ ಎಂದರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗರಾಜ್ ಸಗಂ ಯೋಗ ಶಿಕ್ಷಕರಾದ ಗೋವಿಂದಪ್ಪ, ಮುರುಡಪ್ಪ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಓಂಕಾರ್, ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಭದ್ರಾವತಿಯ ಮೂರ್ತಿ, ಮಂಜುನಾಥ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠದ ತಿಪ್ಪೇಸ್ವಾಮಿ, ಗಣಪತಿಶಾಸ್ತ್ರಿ, ಯೋಗೆಂದ್ರರವರಿಂದ ಗುರು ಪೂರ್ಣಿಮೆಯ ಅಂಗವಾಗಿ ಶ್ರೀ ಶಿವಲಿಂಗಾನಂದ ಶ್ರೀಗಳ ಪಾದ ಪೂಜೆಯನ್ನು ನೆರವೇರಿಸಿದರು. ಸುಬ್ರಾಯಭಟ್ಟರು ವೇದ ಘೋಷಗಳನ್ನು ಮಾಡಿದರೆ, ಜ್ಯೋತಿ ಪ್ರಾರ್ಥಿಸಿದರೆ, ಮಂಜುನಾಥ್ ಗುಪ್ತ ಸ್ವಾಗತಿಸಿದರು, ವೀರಣ್ಣ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಶಿವಲಿಂಗಾನಂದ ಶ್ರೀಗಳಿಗೆ ಕೀರಿಟ ಪೂಜೆಯನ್ನು ನಡೆಸಲಾಯಿತು.