ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯೊಬ್ಬರ ಶವ ಸೌಪಾರ್ಣಿಕ ನದಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ,ಆರ್ ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ(46) ಶವವಾಗಿ ಪತ್ತೆಯಾದ ಮಹಿಳೆ.
ಆಗಸ್ಟ್ 28ರಂದು ಕೊಲ್ಲೂರಿಗೆ ಬಂದಿದ್ದ ವಸುಧ ಅವರು ದೇವರ ದರ್ಶನದ ಬಳಿಕ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದರು.
ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ತೀವ್ರ ಶೋಧ ನಡೆಸಿತ್ತು. ಇದೀಗ ಮಹಿಳೆಯ ಶವ ಮಾವಿನಕಾರು ಎಂಬಲ್ಲಿ ಪತ್ತೆಯಾಗಿದೆ.