ನವದೆಹಲಿ: ಇಂಡಿಯನ್ ಐಡಲ್ 12 ವಿಜೇತ ಪವನ್ದೀಪ್ ರಾಜನ್ ಕಾರು ಭೀಕರ ಅಪ ಘಾತಕ್ಕೀಡಾಗಿದೆ. ಗುಜರಾತ್ನ ಅಹಮದಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಕ ಪವನ್ದೀಪ್ ರಾಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪವನ್ ದೀಪ್ ರಾಜನ್ ಕಾರ್ಯಕ್ರಮ ನಿಮಿತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಳಗಿನ ಜಾವ 3.40ಕ್ಕೆಈ ಘಟನೆ ನಡೆದಿದೆ. ಪವನ್ದೀಪ್ ಮತ್ತು ಇತರ ಇಬ್ಬರು ಸ್ನೇಹಿತರು ಉತ್ತರಾಖಂಡದ ಚಂಪಾವತ್ನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವೈದ್ಯರ ಪ್ರಕಾರ, ಪವನ್ದೀಪ್ ಬಲಗಾಲು ಹಾಗೂ ಕೈಗೆ ಗಂಭೀರ ಗಾಯ ಆಗಿದ್ದು ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿ ಕೊಳ್ಳಲು ಕೆಲವು ದಿನಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ. ಪವನ್ದೀಪ್ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಪವನ್ದೀಪ್ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಆಪ್ತರು ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದ್ದಾರೆ.
ಪೊಲೀಸರ ಪ್ರಕಾರ, ಪವನ್ದೀಪ್ ಪ್ರಯಾಣಿಸುತ್ತಿದ್ದ ಎಂಜಿ ಹೆಕ್ಟರ್ ಕಾರು ಹಿಂದಿನಿಂದ ನಿಲ್ಲಿಸಿದ್ದ ಐಷರ್ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಗಾಯಗಳ ಗಂಭೀರತೆಯನ್ನು ಪರಿಗಣಿಸಿ, ನಂತರ ಅವರನ್ನು ನೋಯ್ಡಾದ ಆಸ್ಪತ್ರೆಗೆ ಸ್ಥಳಾಂತರಿಸ ಲಾಯಿತು. ಪವನ್ದೀಪ್ ತನ್ನ ಸ್ನೇಹಿತ ಅಜಯ್ ಮೆಹ್ರಾ ಮತ್ತು ಚಾಲಕ ರಾಹುಲ್ ಸಿಂಗ್ ಅವರೊಂದಿಗೆ ಪ್ರಯಾಣಿ ಸುತ್ತಿದ್ದರು. ಮೂವರಿಗೂ ಗಂಭೀರ ಗಾಯಗಳಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕ ನಿದ್ದೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.
ಪವನ್ದೀಪ್ ರಾಜನ್ ಉತ್ತರಾಖಂಡದ ಚಂಪಾವತ್ ಜಿಲ್ಲೆಯವರು. ಅವರ ತಂದೆ ಸುರೇಶ್ ರಾಜನ್, ತಾಯಿ ಸರೋಜ್ ರಾಜನ್ ಆಗಿದ್ದು ಪವನ್ದೀಪ್ ರಾಜನ್ ಹಾಡಿನ ಕಂಠಕ್ಕೆ ಭಾರತ ಮರಳಾಗಿದೆ. 2021ರಲ್ಲಿ ಪವನ್ದೀಪ್ ರಾಜನ್ ಇಂಡಿಯನ್ ಐಡಲ್ 12ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.ಈ ಹಿಂದೆ, ಗಾಯಕ 2015 ರಲ್ಲಿ ದಿ ವಾಯ್ಸ್ ಇಂಡಿಯಾ ರಿಯಾಲಿಟಿ ಶೋ ಗೆದ್ದಿದ್ದರು. ಇದರಲ್ಲಿ 50 ಲಕ್ಷ ರೂಪಾಯಿಗಳ ಬಹುಮಾನದ ಹಣ ಮತ್ತು ಒಂದು ಕಾರನ್ನು ಒಳಗೊಂಡ ಟ್ರೋಫಿಯನ್ನು ಗೆದ್ದು ಖ್ಯಾತಿ ಗಳಿಸಿದ್ದರು.