ರಾಜಸ್ಥಾನ: ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಐದು ವರ್ಷದ ಬಾಲಕನೊಬ್ಬ ಮನೆಯಲ್ಲಿದ್ದ ಲೋಡೆಡ್ ಗನ್ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಲೆಗೆ ಬಡಿದು ಸಾವನ್ನಪ್ಪಿದ್ದಾನೆ.!
ಸಾಮಾನ್ಯವಾಗಿ ಚಾಕು ಚೂರಿಗಳನ್ನೇ ಮಕ್ಕಳ ಕೈಗೆ ಸಿಗದಂತೆ ಪೋಷಕರು ಮೇಲೆತ್ತಿಡುತ್ತಾರೆ. ಆದರೆ ಇಲ್ಲಿ 5 ವರ್ಷದ ಪುಟ್ಟ ಬಾಲಕನ ಕೈಗೆ ಲೋಡೆಡ್ ಗನ್ ಸಿಕ್ಕಿದ್ದು, ಇದರಲ್ಲಿ ಆಟವಾಡುತ್ತಿದ್ದ ಬಾಲಕ ಅಚಾನಕ್ ಆಗಿ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಪೋಷಕರ ಅಜಾಗರೂಕತೆಯಿಂದ 5 ವರ್ಷದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಂತ್ತಾಗಿದೆ.