ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕಾರಣರಲ್ಲಿ ಡಿನ್ನರ್ ಮೀಟಿಂಗ್ ಜೋರಾಗಿ ಸದ್ದು ಮಾಡುತ್ತಿದೆ. ನಿನ್ನೆ ರಾತ್ರಿ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಸಚಿವರಿಗೆ, ಶಾಸಕರಿಗೆ ಔತಣಕೂಟ ಕೊಟ್ಟಿದ್ದಾರೆ.
ಅತ್ತ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ರೆ ಇತ್ತ ಸಿಎಂ ಸಿದ್ದರಾಮಯ್ಯ ಬಣದ ಸಚಿವರು, ಶಾಸಕರನ್ನ ಕರೆದು ಸತೀಶ್ ಜಾರಕಿಹೊಳಿ ಔತಣಕೂಟ ನೀಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿಶೇಷ ಅಂದ್ರೆ ಸತೀಶ್ ಜಾರಕಿಹೊಳಿ ನೀಡಿದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿಯಾಗಿದ್ರು. ಸಿಎಂ ಜೊತೆ ಗೃಹ ಸಚಿವ ಡಾ.ಜಿ ಪರಮೇಶ್ವರ್, ಹೆಚ್.ಸಿ ಮಹಾದೇವಪ್ಪ, ಕೆ ಎನ್ ರಾಜಣ್ಣ ಸೇರಿದಂತೆ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಗಳು ಸಹ ಭಾಗಿಯಾಗಿದ್ರು.
ಸಚಿವರು ಶಾಸಕರಿಗೆಂದೇ ವಿಶೇಷವಾಗಿ ಮುದ್ದೆ ನಾಟಿ ಕೋಳಿ ಸಾರು ಮಾಡಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಡಿನ್ನರ್ ಮೀಟಿಂಗ್ ಮೂಲಕ ಮುಂದಿನ ರಾಜಕೀಯ ತಂತ್ರಗಾರಿಕೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯಾಗಿದೆ ಒನ್ ಮ್ಯಾನ್ ಒನ್ ಪೋಸ್ಟ್ ನಿಯಮದಂದತೆ ಈ ವರ್ಷ ಕೆಪಿಸಿಸಿ ಅಧ್ಯಕ್ಷ ಬದಲಾವಣೆಯಾಗುವ ಸಾಧ್ಯತೆ ಇದೆ ಒಂದು ವೇಳೆ ಬದಲಾವಣೆಯಾದ್ರೆ ತಮ್ಮ ಬಣದ ನಾಯಕರನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂಬ ಕಸರತ್ತು ನಡೆದಿದೆ. ಇದರ ಜೊತೆ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿದೆ.
ಸಂಪುಟ ಪುನರಚನೆಯಲ್ಲಿ ಯಾವ ಸಚಿವರಿಗೆ ಕೋಕ್ ಕೊಡಬೇಕು, ಯಾವ ಶಾಸಕರನ್ನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ ಇದ್ರ ಜೊತೆಗೆ ಹೆಚ್ಚುವರಿ ಡಿಸಿಎಂ ಹುದ್ದೆಗಳು ಸೃಷ್ಟಿ ಬಗ್ಗೆ ಕೆಲವು ಹಿರಿಯ ಸಚಿವರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಮಂದಿನ ದೆಹಲಿ ಪ್ರವಾಸದ ವೇಳೆ ಹೈಕಮಾಂಡ್ ಜೊತೆ ಇದ್ರ ಬಗ್ಗೆ ಚರ್ಚೆ ಮಾಡಿ ಎಂದು ಕೆಲ ಸಚಿವರು ಸಿಎಂಗೆ ತಿಳಿಸಿದ್ದಾರೆ.
ಒಟ್ಟಾರೆ ಸತೀಶ್ ಜಾರಕಿಹೊಳಿ ರಾತ್ರಿಯ ಡಿನ್ನರ್ ಮೀಟಿಂಗ್ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ ಆದ್ರಲ್ಲೂ ಡಿಕೆಶಿ ಇಲ್ಲದ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಸಚಿವರು ಶಾಸಕರಿಗೆ ಔತಣಕೂಟ ಕೊಟ್ಟಿದ್ದು ಹಲವು ಚರ್ಚೆಗೆ ಕಾರಣವಾಗಿದೆ.